ಬೆಂಗಳೂರು: ಚಾಲೆಂಜಿಗ್ ಸ್ಟಾರ್ ದರ್ಶನ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ಸಂದರ್ಭ ದರ್ಶನ್ ಅವರ ಮುಂದಿನ ಚಿತ್ರದ ಹೆಸರು’ ಘೋಷಣೆಯಾಗಿದ್ದು, ‘ತಾರಕ್’ ಎಂದು ಹೊಸ ಚಿತ್ರಕ್ಕೆ ಹೆಸರಿಡಲಾಗಿದೆ.
ಪ್ರಕಾಶ್ ಜಯರಾಮ್ ಅವರ ನಿರ್ದೇಶನ ಈ ಚಿತ್ರಕ್ಕಿದ್ದು, ಪ್ರಕಾಶ್ ಹೇಳುವಂತೆ ‘ತಾರಕ್’ ಚಿತ್ರದಲ್ಲಿ ದರ್ಶನ್ ಹೆಸರು ತಾರಕ್ ರಾಮ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾದ ಚಿತ್ರೀಕರಣ ಮಾರ್ಚ್ ಮೊದಲ ವಾರದಿಂದ ಪ್ರಾರಂಭವಾಗಲಿದ್ದು, ಚಿತ್ರತಂಡ ಈಗಾಗಲೇ ಫೋಟೋ ಶೂಟ್ ಮುಗಿಸಿದೆ.
ಚಿತ್ರದ ನಿರ್ದೇಶಕ ಪ್ರಕಾಶ್ ಹೇಳುವ ಪ್ರಕಾರ ಚಿತ್ರೀಕರಣಕ್ಕಾಗಿ ಕೊನೆ ಗಳಿಗೆಯ ಸಿದ್ಧತೆಗಳು ಜಾರಿಯಲ್ಲಿದ್ದು, ನಮ್ಮ ಸಿನೆಮಾಗೆ ದರ್ಶನ್ ದೇಹವನ್ನು ಇನ್ನು ಲೀನಗೊಳಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಅವರಿಗೆ ಇನ್ನಷ್ಟು ಸಮಯಾವಕಾಶ ಬೇಕಿದೆ. ಎಂದಿದ್ದಾರೆ.
ಕೃಷ್ಣಕುಮಾರ್ ಸಿನೆಮ್ಯಾಟೋಗ್ರಫಿ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ದುಷ್ಯಂತ್ ಈ ಸಿನೆಮಾದ ನಿರ್ಮಾಪಕರಾಗಿದ್ದಾರೆ.