ಕೇರಳ: ಕಳೆದ ರಾತ್ರಿ ಕೆಲ ದುಷ್ಕರ್ಮಿಗಳು ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಭಾವನಾ ಅವರ ಮಾಜಿ ಕಾರು ಚಾಲಕ ತನ್ನ ಗುಂಪಿನೊಂದಿಗೆ ಅಂಗಮಾಲಿಯ ಅಥಣಿ ಬಳಿ ಬಲವಂತವಾಗಿ ಭಾವನಾ ಕಾರು ನಿಲ್ಲಿಸಿ ಹತ್ತಿಕೊಂಡಿದ್ದು, ಪಲರಿವಟ್ಟಂವರೆಗೂ ಭಾವನಾ ಅವರಿಗೆ ಕಾರಿನಲ್ಲೇ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಪೋಲಿಸರಿಗೆ ನಟಿ ಭಾವನಾ ದೂರು ನೀಡಿದ್ದಾರೆ.
ತನ್ನ ವಿಡಿಯೋ ಮತ್ತು ಫೋಟೋಗಳನ್ನು ಕೂಡ ದುಷ್ಕರ್ಮಿಗಳು ತೆಗೆದುಕೊಂಡಿದ್ದು, ಪಲರಿವಟ್ಟಂಗೆ ಬಂದ ತಕ್ಷಣ ಅವರು ಕಾರು ನಿಲ್ಲಿಸಿ ಮತ್ತೊಂದು ಕಾರು ಹತ್ತಿ ಪರಾರಿಯಾಗಿದ್ದಾರೆ ಎಂದು ಭಾವನಾ ಹೇಳಿದ್ದಾರೆ.
ಕಾರು ಚಾಲಕ ಮಾರ್ಟಿನ್ ಎಂಬಾತನನ್ನು ಈ ಪ್ರಕರಣ ಹಿನ್ನೆಲೆ ಪೋಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದು, ಕಾಕನಾಡದ ನಿರ್ದೇಶಕರ ಮನೆಗೆ ಘಟನೆ ಬಳಿಕ ತೆರಳಿ ಆಶ್ರಯ ಪಡೆದ ನಂತರ ಭಾವನಾ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.