News Kannada
Tuesday, February 07 2023

ಮನರಂಜನೆ

ನಾನು ಕ್ಲಾಸ್‍ನಿಂದ ಮಾಸ್ ಚಿತ್ರಗಳತ್ತ ತಿರುವುದಕ್ಕೆ ಮಾಧ್ಯಮಗಳೇ ಕಾರಣ: ಸುದೀಪ್

Photo Credit :

ನಾನು ಕ್ಲಾಸ್‍ನಿಂದ ಮಾಸ್ ಚಿತ್ರಗಳತ್ತ ತಿರುವುದಕ್ಕೆ ಮಾಧ್ಯಮಗಳೇ ಕಾರಣ: ಸುದೀಪ್

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಸಾಲು ಸಾಲು ಆಕ್ಷನ್ ಸಿನೆಮಾಗಳಲ್ಲಿ ನಟಿಸುತ್ತಿದ್ದು, ಈ ಬೆಳವಣೆಗೆಗೆ ಮಾಧ್ಯಮಗಳೇ ಕಾರಣ ಎಂದು ಹೇಳಿದ್ದಾರೆ.

ಹೌದು ಈ ಹಿಂದೆ ಸ್ವಾತಿ ಮುತ್ತು, ಮೈ ಆಟೋಗ್ರಾಫ್, ಜಸ್ಟ್ ಮಾತ್ ಮಾತಲ್ಲಿ ಹೀಗೆ ಕ್ಲಾಸ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಸುದೀಪ್ ಇದೀಗ ಮಾಣಿಕ್ಯ, ರನ್ನ , ಕೆಂಪೇಗೌಡ, ಹೆಬ್ಬುಲಿಯಂತಹ ಮಾಸ್ ಚಿತ್ರಗಳಲ್ಲಿ ನಟಿಸುತ್ತಿದ್ದು, ಈ ಬಗ್ಗೆ ಪ್ರತಿಕ್ರಯಿಸಿದ ಅವರು ನಾನು ಸೆನ್ಸಿಬಲ್ ಸಿನಿಮಾ ಮಾಡಿದಾಗ, ಮೀಡಿಯಾದವರು ನನ್ನನ್ನು ತುಂಬಾ ಹೊಗಳಿ ಬರೆಯುತ್ತಿದ್ದರೆ, ಇವತ್ತು ನನ್ನ ಮನೆ ಮುಂದೆ ಇಷ್ಟೊಂದು ಕಾರುಗಳನ್ನು ನೋಡುತ್ತಿರಲಿಲ್ಲ. ಮಾತ್ರವಲ್ಲ ಅವಾರ್ಡ್‍ಗಳ ಹಿಂದೆ ಬೀಳುತ್ತಿದ್ದೆ, ಅಂದು ಮೀಡಿಯಾದವರು ಸೆನ್ಸಿಬಲ್ ಸಿನಿಮಾವನ್ನು ಬೆಂಬಲಿಸದ ಕಾರಣ, ನಾನು ಹಠದ ಮೇಲೆ ಕಮರ್ಷಿಯಲ್ ಸಿನಿಮಾಗಳನ್ನು ಮಾಡುವುದಕ್ಕೆ ಶುರು ಮಾಡಿದೆ, ನಾನು ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ಮಾಡುವುದಕ್ಕೆ ಮಾಧ್ಯಮಗಳು ಸಹ ಒಂದು ಕಾರಣ ೆಂದು ಸುದೀಪ್ ಹೇಳಿದ್ದಾರೆ.

`ಶಾಂತಿ ನಿವಾಸ’ ಹಾಗೂ `ಮಾಣಿಕ್ಯ’ದ ತಿರುಳು ಒಂದೇ. ಹೇಳುವ ರೀತಿ ಮಾತ್ರ ಬೇರೆ ಅಷ್ಟೇ. ಒಂದು ಸಮಯದಲ್ಲಿ ನಾನು ತುಂಬಾ ಸೈಡ್‍ಲೈನ್ ಆಗಿದ್ದೆ. ಅದಕ್ಕೆ ಕಾರಣ ಒಬ್ಬ ಕಲಾವಿದನನ್ನು ಬಾಕ್ಸ್‌‌‌ಆಫೀಸ್ ಕಲೆಕ್ಷನ್, ಓಪನಿಂಗ್ ಪ್ರಭಾವ ಬೀರಿದ್ದು. ಆದರೆ ಎಲ್ಲವನ್ನು ಪಾಸಿಟಿವ್ ಆಗಿ ತಗೆದುಕೊಳ್ಳುವುದಕ್ಕೆ ಶುರು ಮಾಡಿದೆ. ಅಂದಿನಿಂದ ನನ್ನ ಲೈಫ್ ಬದಲಾಯಿತು’ ಕಮರ್ಷಿಯಲ್ ಸಿನಿಮಾ ಮಾಡಿದರೂ, ಒಳ್ಳೆಯ ವಿಷಯಗಳಿರುವ ಸಿನಿಮಾಗಳನ್ನೇ ಮಾಡುತ್ತೇನೆ ಎನ್ನುತ್ತಾರೆ ಸುದೀಪ್.

See also  ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಟ್ಟಿ ಬಿಡುಗಡೆ; ಕನ್ನಡದ ಇಬ್ಬರು ನಟರಿಗೆ ಸಂದ ಪ್ರಶಸ್ತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು