News Kannada
Friday, December 09 2022

ಮನರಂಜನೆ

ಕಾವೇರಿ ತೀರದ ಚರಿತ್ರೆಯ ಚಿತ್ರೀಕರಣ ಆರಂಭ

Photo Credit :

ಕಾವೇರಿ ತೀರದ ಚರಿತ್ರೆಯ ಚಿತ್ರೀಕರಣ ಆರಂಭ

ಮಂಡ್ಯ: ಕಾವೇರಿ ನದಿ ಪಾತ್ರದ ಜನರ ಜನಜೀವನವನ್ನು ಪ್ರತಿಬಿಂಬಿಸುವ ಕಥಾ ಹಂದರ ಹೊಂದಿರುವ ಕಾವೇರಿ ತೀರದ ಚರಿತ್ರೆ ಎಂಬ ಮಕ್ಕಳ ಚಲನಚಿತ್ರದ ಚಿತ್ರೀಕರಣಕ್ಕೆ ಕೆ.ಆರ್.ಪೇಟೆ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣವಾಗಿರುವ ಭೂವರಹನಾಥಸ್ವಾಮಿ ಶ್ರೀ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತರಾದ ಗೃಹ ರಕ್ಷಕ ದಳ ಘಟಕಾಧಿಕಾರಿ ಜಿ.ಪಿ.ರಾಜು ಚಾಲನೆ ನೀಡಿದರು.

ಬಳಿಕ ಮಾತನಾಡಿ ಕಾವೇರಿ ಕನ್ನಡ ನಾಡಿನಲ್ಲಿ ಹುಟ್ಟಿದರೂ ಕಾವೇರಿ ನದಿ ಪಾತ್ರದ ರೈತರಿಗೆ ಹಾಗೂ  ಜನತೆಗೆ ಸಂತೃಪ್ತಿಯಾಗಿ ನೀರಿನ ದಾಹ ಇಂಗಿಸಲು ಸಾಧ್ಯವಾಗಿಲ್ಲ. ಏಕೆಂದರೆ ಕನ್ನಂಬಾಡಿ ಅಣೆಕಟ್ಟೆಯನ್ನು ಕಟ್ಟುವ ಸಂದರ್ಭದಲ್ಲಿ ತಮಿಳುನಾಡಿನೊಂದಿಗೆ ಮಾಡಿಕೊಂಡ ನೀರು ಪೂರೈಕೆ ಒಪ್ಪಂದವೇ ಕಾವೇರಿ ನೀರಿನ ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದರು. ಹಿಂದೆ ಸಾಕಷ್ಟು ಮಳೆಯಾಗುತ್ತಿತ್ತು. ಆಗ ಕರ್ನಾಟಕಕ್ಕೆ ಸಾಕಷ್ಟು ನೀರನ್ನು ಉಳಿಸಿಕೊಂಡು ಒಪ್ಪಂದದಂತೆ ತಮಿಳುನಾಡಿಗೆ ಸಾಕಾಗುವಷ್ಟು ನೀರನ್ನು ಬಿಡುಗಡೆ ಮಾಡಲು ಯಾವುದೇ ತೊಂದರೆ ಇರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಕಾವೇರಿ ನೀರಿನ ಮೂಲಗಳಲ್ಲಿ ಕಾಡು ನಾಶವಾಗಿ ಮಳೆಯಿಲ್ಲದೆ ನೀರಿನ ಕೊರತೆ ಎದುರಾಗಿದೆ. ಕಾವೇರಿ ನದಿಯಲ್ಲಿ ಅಗತ್ಯ ನೀರಿನ ಸಂಗ್ರವಾಗದೇ ಇರುವ ಕಾರಣ ಉಭಯ ರಾಜ್ಯಗಳಿಗೆ ನೀರಿನ ಹಂಚಿಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಎರಡು ರಾಜ್ಯಗಳ ನಡುವೆ ದ್ವೇಷ ಅಸೂಯೆಗಳು ಹೆಚ್ಚಾಗುತ್ತಿವೆ. ಕಾವೇರಿ ನದಿಯ ನೀರಿನ ಮೂಲಗಳ ಉಳಿವಿಗೆ ಅರಣ್ಯ ಉಳಿಸುವುದು. ಅಂತರ್ಜಲ ವೃದ್ದಿಸುವುದು. ನಗರೀಕರಣ ತಪ್ಪಿಸುವುದು ಸೇರಿದಂತೆ ಕಾವೇರಿ ಉಳಿವಿಗಾಗಿ ಏನೇನು ಮಾಡಬೇಕು. ಕಾವೇರಿ ಕಣಿವೆಯ ಜನರು ಯಾವ ರೀತಿಯ ಜೀವನ ಸಾಗಿಸುತ್ತಿದ್ದಾರೆ. ಕಾವೇರಿಯಿಂದ ಸಂತೃಪ್ತರಾಗಿದ್ದಾರೆಯೇ,  ಇಲ್ಲವೇ ಎನ್ನುವುದರ ಸಂಕ್ಷಿಪ್ತ ಇತಿಹಾಸ ತಿಳಿಸಿಕೊಡುವ ಪ್ರಯತ್ನವನ್ನು ಕಾವೇರಿ ತೀರದ ಚಿರಿತ್ರೆ ಚಲನಚಿತ್ರದಲ್ಲಿ ಮಾಡಲಾಗಿದೆ ಎಂದರು.

ಚಲನಚಿತ್ರವು ತಾಲೂಕಿನ ಪವಿತ್ರ ಯಾತ್ರಾಸ್ಥಳವಾದ ಭೂವರಹನಾಥಸ್ವಾಮಿ ಶ್ರೀ ಕ್ಷೇತ್ರ, ಹೇಮಾವತಿ, ಕಾವೇರಿ ಲಕ್ಷಣ ತೀರ್ಥ ನದಿಗಳ ಸಂಗಮ ಕ್ಷೇತ್ರವಾದ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮ ಶ್ರೀ ಕ್ಷೇತ್ರ, ಹೊಯ್ಸಳದ ಶಿಲ್ಪಕಲೆಯ ತವರೂರು ಹೊಸಹೊಳಲು, ಹೇಮಗಿರಿ ಅಣೆಕಟ್ಟೆ, ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ಶ್ರೀ ಕ್ಷೇತ್ರಗಳಲ್ಲಿ ಚಿತ್ರೀಕರಣ ನಡೆಯಲಿದೆ ಒಟ್ಟಾರೆ ಕಾವೇರಿ ಕಣಿವೆ ಜನರ ಜನಜೀವನ ತಿಳಿಸಿಕೊಡುವ ಈ ಚಲನಚಿತ್ರವು ಯಶಸ್ವಿಯಾಗಲಿ ಎಂದು ಆಶಿಸುವುದಾಗಿ ತಿಳಿಸಿದರು.

ಚಿತ್ರದ ನಿಮರ್ಾಪಕ ಪಿರಿಯಾಪಟ್ಟಣ ಎನ್.ಡಿ.ಪುಟ್ಟರಾಜು, ನಿದರ್ೇಶಕ ಬೇಲೂರು ಪ್ರವೀಣ್, ಶಿವು ತುಂಬಾಲ, ಚಿತ್ರದ ನಾಯಕ ನಟ ನವೀನ್ ಕುಮಾರ್ಗೌಡ, ನಾಯಕನಟಿ ಪವಿತ್ರ, ಸಹ ನಿದರ್ೇಶಕರಾದ ಸೋಮೇಶ್, ನಾಗೇಶ್, ಅಣ್ಣಾಜಿ, ಪೃಥ್ವಿ, ಸಹ ಸಂಕಲನಕಾರರಾದ ಭಾಸ್ಕರ್, ಯತೀಶ್, ಕಾರ್ಯಕಾರಿ ನಿಮರ್ಾಪಕರಾಗಿ ಗಂಗೇನಹಳ್ಳಿ ರಾಜು, ತಾಲೂಕಿನ ಪುಟಾಣಿ ಕಲಾವಿದರಾದ ಕೃಪಾಹಾಳೇಗೌಡ, ವಿಠಲಾಪುರ ಪ್ರೀತಿ, ಅಕ್ಕಿಹೆಬ್ಬಾಳು ಆಕಾಶ್, ಕಾತರ್ೀಕ್, ಇಂಚರ ದೇವರಾಜು, ಲಾವಣ್ಯ.ಎಸ್.ಸಜ್ಜನ್ ಮತ್ತಿತರರು ಚಿತ್ರೀಕರಣದ ಪೂಜಾ  ಸಂದರ್ಭದಲ್ಲಿ ಭಾಗವಹಿಸಿದ್ದರು.   

See also  ಭುಜಂಗ ಚಿತ್ರದ ಟ್ರೈಲರ್, ಧ್ವನಿಸುರಳಿ ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು