ಬೆಂಗಳೂರು: ಸ್ಯಾಂಡಲ್ ವುಡ್ ಜನಪ್ರಿಯ ನಟಿ ಅಮೂಲ್ಯ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಮಾರ್ಚ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬಂದಿವೆ.
ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ‘ಐಶು’ ಎಂದೇ ಖ್ಯಾತಿಯಾಗಿದ್ದ ಅಮೂಲ್ಯ ಶೀಘ್ರದಲ್ಲೇ ಜಗದೀಶ್ ಎಂಬುವರನ್ನು ವರಿಸಲಿದ್ದಾರೆ. ಮಾರ್ಚ್ 6 ರಂದು ಅಮೂಲ್ಯ ಅವರ ನಿಶ್ಚಿತಾರ್ಥ ನಡೆಯಲಿದೆ. ಬೆಂಗಳೂರಿನವರಾದ ಜಗದೀಶ್ ಲಂಡನ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ ಎನ್ನಲಾಗಿದೆ. ಅಮೂಲ್ಯ ಮತ್ತು ಜಗದೀಶ್ ವಿವಾಹಕ್ಕೆ ಎರಡು ಕುಟುಂಬದವರು ಒಪ್ಪಿ ನಿಶ್ಚಿತಾರ್ಥಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.