ದೇವದಾಸ್ ಕಾಪಿಕಾಡ್ ಅವರ ನಿರ್ದೇಶನದ ಅರ್ಜುನ್ ಕಾಪಿಕಾಡ್ ಅಭಿನಯದ ಸೂಪರ್ ಹಿಟ್ ‘ಚಂಡಿಕೋರಿ’ ಚಿತ್ರದಲ್ಲಿ ‘ಮಟ್ಟ್ ದ ಪೊಣ್ಣ್’ ಆಗಿ ಅಭಿನಯಿಸಿದ ನವಿಲು ಕಂಗಳ ಚೆಲುವೆ ಕರಿಷ್ಮಾ ತನ್ನ ನಟನೆ ಮತ್ತು ನಾಟ್ಯದಿಂದ ತುಳು ಪ್ರೇಕ್ಷಕನ ಹೃದಯ ಗೆದ್ದಿರುವುದು ಮಾತ್ರವಲ್ಲದೆ ತನ್ನ ಚೊಚ್ಚಲ ಚಿತ್ರಕ್ಕೆ ‘ಅತ್ಯುತ್ತಮ ನಟಿ’ ಪ್ರಶಸ್ತಿಯನ್ನೂ ಪಡೆದಿದ್ದರು. ಆದರೆ ನಂತರ ಎಲ್ಲೂ ಕಾಣಿಸಿಕೊಳ್ಳದ ಕರಿಷ್ಮಾ ಆಕಸ್ಮಿಕವಾಗಿ ‘ನ್ಯೂಸ್ ಕನ್ನಡ’ದ ಜೊತೆ ಮಾತಿಗೆ ಸಿಕ್ಕರು.
1.ಕರಿಷ್ಮಾ ಚಂಡಿಕೋರಿಗಿಂತ ಮೊದಲು ಎಲ್ಲಿದ್ರಿ? ಏನ್ ಮಾಡ್ತಿದ್ರಿ?
ಚಂಡಿಕೋರಿಗಿಂತ ಮೊದಲು ನಾನು ಮಂಗಳೂರಿನ ಎಸ್ ಡಿ ಎಂ ಕಾಲೇಜಿನಲ್ಲಿ ಎಂಬಿಎ ಮಾಡ್ತಿದ್ದೆ. ಡ್ಯಾನ್ಸರ್ ಆಗಿದ್ದೆ ಸೋ ಅಲ್ಲಿಂದ ನನಗೆ ಮೊದಲ ಅವಕಾಶ ಚಂಡಿಕೋರಿ ಚಿತ್ರಕ್ಕೆ ನಾಯಕಿಯಾಗಿ ಸಿಕ್ತು.
2.ಚಂಡಿಕೋರಿ ಚಿತ್ರದ ನಂತರ ಎಲ್ಲಿ ಹೋದ್ರಿ? ಅವಕಾಶಗಳು ಬರ್ಲಿಲ್ವಾ? ಅಥವಾ ನೀವೇ ದೂರ ಮಾಡ್ಬಿಟ್ರಾ?
ಚಂಡಿಕೋರಿ ಚಿತ್ರಕ್ಕೆ ನನಗೆ ಬೆಸ್ಟ್ ಆ್ಯಕ್ಟರ್ ಡೆಬ್ಯು ಫಿಮೇಲ್ ಅವಾರ್ಡ್ ಸಿಕ್ತು. ಸಿನಿಮಾ ಮಾಡುವ ಯಾವುದೇ ಪ್ಲಾನ್ಸ್ ಇರ್ಲಿಲ್ಲ ನನಗೆ. ಆದರೆ ಚಂಡಿಕೋರಿನಲ್ಲಿ ಸಿಕ್ಕ ಒಂದೊಳ್ಳೆ ಅವಕಾಶವನ್ನು ಮಿಸ್ ಮಾಡಲು ಇಷ್ಟ ಇರ್ಲಿಲ್ಲ.ಚಂಡಿಕೋರಿ ನಂತರ ನನಗೆ ಅನೇಕ ಅವಕಾಶಗಳು ಸಿಕ್ಕಿದ್ದವು. ಆದರೆ ಅದಾಗಲೇ ನಾನು ಕಾಲೇಜ್ ಮುಗಿಸಿ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಜಾಬ್ ಗೆ ಸೆಲೆಕ್ಟ್ ಆಗಿದ್ದೆ. ಪ್ಯಾಷನ್ ಮತ್ತು ಪ್ರೊಫೆಷನ್ ಮಿಕ್ಸ್ ಮಾಡೋದು ಇಷ್ಟ ಇರ್ಲಿಲ್ಲ ಹಾಗಾಗಿ ಸ್ವಲ್ಪ ದೂರ ಉಳಿಯಬೇಕಾಯಿತು.
3.ಮೊದಲ ಸಿನಿಮಾ ಚಂಡಿಕೋರಿ ಅನುಭವ ಹೇಗಿತ್ತು?
ಚಂಡಿಕೋರಿಯಲ್ಲಿ ನನಗೆ ಸಿಕ್ಕ ಅನುಭವವನ್ನು ವಿವರಿಸಲು ಸಾಧ್ಯನೇ ಇಲ್ಲ. ಚಂಡಿಕೋರಿ ತಂಡಕ್ಕೆ ತುಂಬಾ ಕೃತಜ್ಞಳಾಗಿದ್ದೇನೆ. ನಿರ್ದೇಶಕರಾಗಲೀ, ನಿರ್ಮಾಪಕರಾಗಲೀ ಅಥವಾ ನಟರಾಗಲಿ ನನ್ನನ್ನು ಹೊಸಬಳನ್ನದೆ ಸಹಕರಿಸಿದ್ದಾರೆ. ಇಲ್ಲಿ ನನಗೆ ತುಂಬಾನೇ ಕಲಿಯೋಕೆ ಸಿಕ್ತು.
4.ಕರಿಷ್ಮಾ ಆ್ಯಕ್ಟರಾ ಅಥವಾ ಡ್ಯಾನ್ಸರ್?
ಕರಿಷ್ಮಾ ಅಮೀನ್ ಅಂದ್ರೆ ಇವೆರಡರ ಮಿಶ್ರಣ ಅಂತ ಹೇಳ್ಬಹುದು (ನಗು). ನಾನು 2.5 ವರ್ಷ ವಯಸ್ಸಿನ ಮಗುವಾಗಿದ್ದಾಗಲೇ ಡ್ಯಾನ್ಸ್ ಮಾಡ್ತಿದ್ದೆ. ಜೊತೆಜೊತೆಯಲ್ಲೇ ಆ್ಯಕ್ಟಿಂಗ್ ಕೂಡ ಮಾಡ್ತಿದ್ದೆ. ಆದರೆ ಹೆಚ್ಚಾಗಿ ಮಾಡಿದ್ದು ಡ್ಯಾನ್ಸ್.
5.ಹೊಸ ಸಿನ್ಮಾ ಅಥವಾ ಬೇರೆ ಏನಾದ್ರೂ?
ಚಂಡಿಕೋರಿ ನಂತರ ತುಂಬಾ ಅವಕಾಶಗಳು ಬಂದ್ವು ಆದರೆ ಕಥೆ ಇಷ್ಟ ಆಗಿರ್ಲಿಲ್ಲ ಹಾಗಾಗಿ ಒಪ್ಕೊಂಡಿಲ್ಲ. ಮುಂದೆ ಒಳ್ಳೆ ಕಥೆ, ಒಳ್ಳೆ ಟೀಂ ಸಿಕ್ಕರೆ ಖಂಡಿತಾ ಒಪ್ಪಿಕೊಳ್ತೇನೆ.
6.ಮತ್ತೆ ಕರಿಷ್ಮಾರನ್ನು ತೆರೆ ಮೇಲೆ ನೋಡೋದು ಯಾವಾಗ?
ಸದ್ಯಕ್ಕೆ ನಾನು ಏನನ್ನೂ ಹೇಳುವ ಹಾಗಿಲ್ಲ. ಆದರೆ ನನಗೆ ತುಳುನಾಡಿನ ಪ್ರೇಕ್ಷಕರ ಪ್ರೋತ್ಸಾಹ ಮತ್ತು ಆಶೀರ್ವಾದ ತುಂಬಾನೇ ಬೇಕು. ಅವರಿಲ್ಲದೆ ನಾನು ಏನೂ ಅಲ್ಲ. ಸ್ವಲ್ಪ ವೇಯ್ಟ್ ಮಾಡಿ ಎಲ್ಲವನ್ನೂ ಶೀಘ್ರದಲ್ಲಿ ಹೇಳ್ತೇನೆ.