ಅಮರಾವತಿ: ಸ್ಯಾಂಡಲ್ ವುಡ್ ನ ಜನಪ್ರಿಯ ನಟ ಕಿಚ್ಚ ಸುದೀಪ್ ಅವರ ತೆಲುಗಿನ ‘ಈಗ’ ಚಿತ್ರದ ಅಭಿನಯಕ್ಕಾಗಿ ಆಂಧ್ರಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ನಂದಿ ಪ್ರಶಸ್ತಿ ಆಯ್ಕೆಯಾಗಿದ್ದು, ಅತ್ಯುತ್ತಮ ಖಳನಟ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಆಂಧ್ರ ಸರ್ಕಾರ ಇಂದು 2012-13ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿದ್ದು, ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಈಗ’ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರಕಥೆ, ಸೇರಿದಂತೆ ಹಲವು ಪ್ರಶಸ್ತಿಗಳನ್ನ ಪಡೆದುಕೊಂಡಿದೆ. ತೆಲುಗು ನಟ ನಾನಿ ಮತ್ತು ಸಮಂತಾ ನಾಯಕ, ನಾಯಕಿಯಾಗಿ ಅಭಿನಯಿಸಿದ್ದ ‘ಈಗ’ದಲ್ಲಿ ಸುದೀಪ್ ವಿಲನ್ ಆಗಿ ಅಭಿನಯಿಸಿದ್ದರು.ಸುದೀಪ್ ಅವರು ತೆಲುಗು ಚಿತ್ರದಲ್ಲಿ ಅಭಿನಯಿಸಿದ ಮೊದಲ ಚಿತ್ರದಲ್ಲೇ ‘ನಂದಿ ಪ್ರಶಸ್ತಿ’ ಆಯ್ಕೆಯಾಗಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಷಯ.