ಲಾಸ್ ಎಂಜಲೀಸ್: ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಂಪು ಹಾಸಿನ ಮೇಲೆ ನಡೆದು ಮಿಂಚು ಹರಿಸಿದ ಪ್ರಿಯಾಂಕಾ ಅವರ ತೆರೆಯ ಹಿಂಬದಿಯಲ್ಲಿ ನಡೆಸಿದ ಸಂದರ್ಶನದ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪ್ರಿಯಾಂಕಾ ಕ್ಷಣದಲ್ಲಿ ಟೆಕೀಲಾ ಶಾಟ್ ಕುಡಿದು ಮುಗಿಸಿ, ಇನ್ನು ಮನೆಗೆ ಹೊರಡುವೆ ಎಂದು ಹೇಳುವ ದೃಶ್ಯವಿದೆ.
ನಿರೂಪಕಿ ಕೆಲಿ ರಿಪಾ ಹಾಗೂ ರೂಪದರ್ಶಿ ಕ್ರಿಸ್ಸಿ ಟೀಜೆನ್ ನಡೆಸಿದ ಸಂದರ್ಶನದ ಕೊನೆಯಲ್ಲಿ ಪ್ರಿಯಾಂಕಾ ಕ್ಷಣದಲ್ಲಿ ಟೆಕೀಲಾ ಶಾಟ್ ಕುಡಿದು ಮುಗಿಸಿದ್ದು, ಸೆಲೆಬ್ರಿಟಿಗಳ ಹುಡುಕಾಟದಲ್ಲಿದ್ದ ಇವರು, ನಟಿ ಜೆನಿಫರ್ ಆ್ಯನಿಸ್ಟನ್ ಅವರನ್ನು ಕರೆದು ಸಂದರ್ಶನ ಪ್ರಾರಂಭಿಸುತ್ತಾರೆ. ಇವರ ಪ್ರಶ್ನೆಗಳಿಂದ ಜೆನಿಫರ್ ಕೆಲಹೊತ್ತು ಗೊಂದಕ್ಕೆ ಸಿಲುಕುತ್ತಾರೆ. ಹೀಗೆ ತಮಾಷೆ, ನಗು ಹಾಗೂ ಕೊನೆಯಲ್ಲಿ ಮದ್ಯ ಹೀರುವ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.