ಮುಂಬಯಿ: ಬಾಲಿವುಡ್ನ ಖ್ಯಾತ ನಿರ್ಮಾಪಕ, ಕಾಫಿ ವಿತ್ ಕರಣ್ ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ವಿವಾಹವಾಗದೇ ಎರಡು ಮಕ್ಕಳ ತಂದೆಯಾಗಿದ್ದಾರೆ. ಕರಣ್ ಜೋಹರ್ ಬಾಡಿಗೆ ತಾಯಿಯ ಮೂಲಕ ಮಗ ಮತ್ತು ಮಗಳನ್ನು ಪಡೆದಿದ್ದಾರೆ.
ನನ್ನ ಕುಟುಂಬಕ್ಕೆ ಇಬ್ಬರು ಮಕ್ಕಳು ಸೇರ್ಪಡೆಯಾಗಿರುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತಸವಾಗುತ್ತಿದೆ. ನಾನು ತಂದೆಯಾಗಿದ್ದಕ್ಕೆ ನನಗೆ ಅತೀವ ಆನಂದವಾಗುತ್ತಿದೆ. ಔಷಧೀಯ ವಿಜ್ಞಾನದ ಸಹಾಯದಿಂದ ಎರಡು ಅಮೂಲ್ಯ ರತ್ನಗಳು ನನಗೆ ಸಿಕ್ಕಂತಾಗಿದೆ ಎಂದು ಕರಣ್ ಜೋಹರ್ ಟ್ವೀಟ್ ಮಾಡಿದ್ದಾರೆ.
ಕರಣ್ ತಮ್ಮ ಬುಕ್ನಲ್ಲಿ ತನಗೆ ಮಕ್ಕಳು ಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು. ಮಗಳಿಗೆ ರೂಹಿ ಎಂದು ಮಗನಿಗೆ ಯಶ್ ಅಂತ ಹೆಸರಿಡಲಾಗಿದೆ.