ಮುಂಬೈ: ಇತ್ತೀಚೆಗೆ ಪಾರ್ಟಿಯೊಂದರಲ್ಲಿ ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ಧರಿಸಿದ್ದ ಉಡುಗೆಯಲ್ಲಿ ಸೋನಮ್ ದೇಹದ ಬಹುತೇಕ ಭಾಗ ಕಾಣುತ್ತಿತ್ತು ಹಾಗೂ ಈ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಷಯ ಭಾರೀ ಸುದ್ದಿ ಮಾಡಿತ್ತು.
ಸೋನಮ್ ಇಂಥ ಉಡುಗೆ ಧರಿಸುವುದನ್ನು ಬಾಲಿವುಡ್ ಇಷ್ಟಪಡದು ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಸೋನಮ್ ಉಡುಗೆ ಬಗ್ಗೆ ಮಾಧ್ಯಮಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಹಲವಾರು ಟೀಕೆಗಳು ಕೇಳಿ ಬಂದಿತ್ತು.
ಕೆಲ ಮಾಧ್ಯಮಗಳು ಸೋನಮ್ ಚಿತ್ರ ಸಹಿತ ಸುದ್ದಿ ಮಾಡಿದ್ದು, ಸೋನಮ್ಗೆ ಈ ಉಡುಗೆ ಹೊಂದುತ್ತಿಲ್ಲ. ಉಡುಗೆ ಅವರ ದೇಹಕ್ಕೆ ಕಂಫರ್ಟ್ ಆಗಿಲ್ಲ. ಹೀಗಾಗಿ ಆಕೆಯ ದೇಹದ ಬಹುತೇಕ ಭಾಗ ಕಾಣುತ್ತಿದೆ ಎಂದು ಟೀಕಿಸಿದ್ದವು.
ಸೋನಮ್ ಕಪೂರ್ ತಮ್ಮ ಮೇಲಿನ ಟೀಕೆಗಳಿಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದು, ನನ್ನ ದೇಹದ ಬಗ್ಗೆ ನನಗೆ ಹೆಮ್ಮೆ ಇದೆ. ಈ ಘಟನೆಯ ಬಗ್ಗೆ ನಾನು ತೀಕ್ಷ್ಣವಾಗಿ ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ, ಆ ಉಡುಗೆಯಲ್ಲಿ ನಾನು ಕಂಫರ್ಟ್ ಆಗಿದ್ದೆ. ಆದರೆ ಉಡುಗೆಯ ಬಗ್ಗೆ ವರದಿಯಾದ ರೀತಿ ಸ್ವಲ್ಪವೂ ಸರಿಯಲ್ಲ (ಸೆಕ್ಸಿಯೆಸ್ಟ್ ನಾನ್ಸೆನ್ಸ್). ನಾನು ಧರಿಸಿದ್ದ ಉಡುಗೆಯ ಚಿತ್ರ ತೆಗೆದಿರುವ ರೀತಿ ಕೂಡ ಆ ಛಾಯಾಗ್ರಾಹಕರ ಅಭಿರುಚಿ ಎಂಥದ್ದು ಎಂಬುದನ್ನು ತೋರುತ್ತದೆ ಎಂದು ಸೋನಮ್ ತಿರುಗೇಟು ನೀಡಿದ್ದಾರೆ.