ಬೆಂಗಳೂರು: ಚೆಲುವಿನ ಚಿತ್ತಾರ ಖ್ಯಾತಿಯ ನಟಿ ಅಮೂಲ್ಯ ಹಾಗೂ ಜಗದೀಶ್ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಸೋಮವಾರ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತು.
ಇತ್ತೀಚಿಗಷ್ಟೇ ತಾಂಬೂಲ ಬದಲಾಯಿಸಿಕೊಂಡಿದ್ದ ಎರಡು ಕುಟುಂಬಗಳು, ಮೈಸೂರ್ ರೋಡ್ನಲ್ಲಿರುವ ಶ್ರೀ ಸಾಯಿ ಪ್ಯಾಲೇಸ್ನಲ್ಲಿ ಗ್ರ್ಯಾಂಡ್ ಆಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ಸೋಮವಾರ ಸಂಜೆ ಝಗಮಗಿಸೋ ಲೈಟಿಂಗ್ಸ್, ಕಲರ್ಫುಲ್ ಹೂಗಳಿಂದ ಅಲಂಕೃತಗೊಂಡಿದ್ದ ಸಾಯಿ ಪ್ಯಾಲೇಸ್ನಲ್ಲಿ ಅಮೂಲ್ಯ ಹಾಗೂ ಜಗದೀಶ್ ಎಂಗೇಜ್ಮೆಂಟ್ ಅದ್ಧೂರಿಯಾಗಿ ನೆರವೇರಿತು.
ಇನ್ನು ಕಾರ್ಯಕ್ರಮಕ್ಕೆ ಖ್ಯಾತ ಸ್ಯಾಕ್ಸೋಫೋನ್ ವಾದಕ ಹರಿಪ್ರಸಾದ್ ಅವರು ಸಂಗೀತ ನುಡಿಸಿದ್ದು, ಇಡೀ ಕಾರ್ಯಕ್ರಮದ ಮೆರುಗು ಹೆಚ್ಚಿಸಿತ್ತು. ಅಂತೆಯೇ ವರ ಜಗದೀಶ್ ಅವರ ಅಣ್ಣ ಹಾಗೂ ಸಹೋದರಿ ತಂದಿದ್ದ ವಿಶಿಷ್ಟ ಕೇಕ್ ಕೂಡ ಎಲ್ಲರ ಕಣ್ಮನ ಸೆಳೆಯಿತು. ಅಮೂಲ್ಯ ಹಾಗೂ ಜಗದೀಶ್ ಅವರು ಪರಸ್ಪರರ ಕೈಗೆ ವಜ್ರದ ಉಂಗುರಗಳನ್ನು ತೊಡಿಸಿದರು. ಕುಟುಂಬ ಮೂಲಗಳು ತಿಳಿಸಿರುವಂತೆ ಇದೇ ಮೇ ತಿಂಗಳ 10-11 ಅಥವಾ 20-21ರಂದು ವಿವಾಹ ಕಾರ್ಯಕ್ರಮ ನೆರವೇರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.