ಮೈಸೂರು: ದರ್ಶನ ನಡುವಿನ ಟ್ವೀಟರ್ ವಾರ್ ಬಗ್ಗೆ ನಟ ಕಿಚ್ಚ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡದೆ ಈ ವಿಚಾರವನ್ನ ಇಲ್ಲಿಗೆ ಮುಗಿಸಿ ಎಂದು ಕೈಮುಗಿದ ಪ್ರಸಂಗ ಮೈಸೂರಿನ ಸಂಗಮ್ ಚಿತ್ರಮಂದಿರದಲ್ಲಿ ನಡೆಯಿತು.
ಹೆಬ್ಬುಲಿ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನಲ್ಲೆಯಲ್ಲಿ ಅಭಿಮಾನಿ ಥ್ಯಾಂಕ್ಸ್ ಹೇಳುವ ಸಲುವಾಗಿ ನಗರದ ಚಿತ್ರಮಂದಿರಗಳಿಗೆ ಭೇಟಿ ನೀಡುವ ಸಲುವಾಗಿ ಆಗಮಿಸಿದ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಹೆಬ್ಬುಲಿ ಚಿತ್ರ ರಾಜ್ಯದ ಎಲ್ಲ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನಲ್ಲೆಯಲ್ಲಿ ರಾಜ್ಯದ ಎಲ್ಲ ಕಡೆ ಚಿತ್ರ ಮಂದಿರಗಳಿಗೆ ಭೇಟಿ ನೀಡಿ ಅಭಿಮಾನಿಗಳಿಗೆ ಥ್ಯಾಂಕ್ಸ್ ತಿಳಿಸುವ ಸಲುವಾಗಿ ಮೈಸೂರಿಗೆ ಬಂದಿದ್ದೇನೆ. ಯೋಧರ ಬಗ್ಗೆ ಮುಂದಿನ ದಿನಗಳಲ್ಲಿ ಅವಕಾಶ ಬಂದರೆ ಚಿತ್ರ ಮಾಡುತ್ತೇನೆ. ಜಮ್ಮುಕಾಶ್ಮೀರದಲ್ಲಿ ಯೋಧರ ಸ್ಥಿತಿ ನಾವು ಅಂದುಕೊಂಡತೆ ಇಲ್ಲ. ಕಷ್ಟ ಇದೆ. ನಮ್ಮ ಚಿತ್ರ ತಂಡದಿಂದ ಈಗಾಗಲೇ ಸಹಾಯ ಮಾಡಿದ್ದೇವೆ ಎಂದರು.
ಇನ್ನೂ ದರ್ಶನ ನಡುವಿನ ಸ್ನೇಹದ ಟ್ವೀಟರ್ ವಾರ್ ಬಗ್ಗೆ ಕೈಮುಗಿದ ಸುದೀಪ್ ಈ ವಿಚಾರವನ್ನ ಇಲ್ಲಿಗೆ ಮುಗಿಸಿ ಎಂದು ಕೈಮುಗಿದು ಹೊರಟು ಹೋದರು.