ತುಳುನಾಡಿನ ಸಾಂಸ್ಕೃತಿಕ ಕ್ರೀಡೆಯಾದ ಕಂಬಳವನ್ನು ನಿಷೇಧಿಸಲು ಹೊರಟ ‘ಪೇಟಾ’ದ ವಿರುದ್ಧ ಅದೆಷ್ಟುಜನ ತಿರುಗಿ ಬಿದ್ದರು, ಬೀದಿ ಬೀದಿಗಳಲ್ಲಿ ಪ್ರತಿಭಟಿಸಿ ತಮ್ಮ ನಾಡಿನ ಕಲೆಯನ್ನು ಉಳಿಸಲು ಕಲಾವಿದರು, ವಿದ್ಯಾರ್ಥಿಗಳೆನ್ನದೆ, ಜಾತಿ-ಭೇದವಿಲ್ಲದೆ ಘೋಷಣೆಗಳನ್ನು ಕೂಗಿದರು ಮತ್ತುಇದರಿಂದ ಎಚ್ಚೆತ್ತ ರಾಜ್ಯ ಸರಕಾರ ಕಂಬಳಕ್ಕೆ ಗ್ರೀನ್ ಸಿಗ್ನಲ್ ನೀಡುವುದರೊಂದಿಗೆ ಜನ-ದನಿಗೆ ಬೆಲೆಯೂ ಕೊಟ್ಟಿತು.
ಈ ಸಂದರ್ಭದಲ್ಲಿ ಒಂದಷ್ಟು ಜನ ಪ್ರತಿಭಾವಂತರು ಸೇರಿ ಕಂಬಳಕ್ಕೆ ಬೆಂಬಲ ನೀಡುವ ಹಾಡುಗಳನ್ನು ರಚಿಸಿ ಸೈ ಎನಿಸಿಕೊಂಡರು. ಇವರಲ್ಲಿ ಯುವ ಪ್ರತಿಭೆ ಅಕ್ಷಿತ್ ಶೆಟ್ಟಿ ಮತ್ತು ತಂಡ ಸ್ವಲ್ಪ ವಿಭಿನ್ನವಾಗಿ ಅಂದರೆ ತುಳು-ಕನ್ನಡ ಹಾಡನ್ನು ರಚಿಸಿ, ಚಿತ್ರೀಕರಿಸಿ ತುಳುನಾಡಿಗೆ ಮಾತ್ರವಲ್ಲದೆ ಪೂರ್ತಿ ಕರುನಾಡಿಗೆ ಕಂಬಳದ ವಿಶೇಷತೆಯನ್ನುತಿಳಿಸುವುದರೊಂದಿಗೆ, ‘ಪ್ರಾಣಿ ದಯಾಸಂಘ’ಕ್ಕೆ ಒಂದಷ್ಟು ಬುದ್ಧಿ ಮಾತುಗಳನ್ನುಹೇಳಿದೆ. ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಂಗೀತ ನಿರ್ದೇಶಕ, ಮ್ಯೂಸಿಕ್ ಮಾಂತ್ರಿಕ ಗುರುಕಿರಣ್ ಮತ್ತುಬಾಲಪ್ರತಿಭೆ, ಬಾಲಿವುಡ್ ಸಂಗೀತ ದಿಗ್ಗಜರಿಂದ ಭೇಷ್ ಎನಿಸಿಕೊಂಡ ಸಾನ್ವಿ ಶೆಟ್ಟಿ ಕಂಠಸಿರಿಯೊಂದಿಗೆ ಮೂಡಿ ಬಂದಿರುವ ಹಾಡಿಗೆ ತುಳುನಾಡಿನ ಹಾಸ್ಯಬ್ರಹ್ಮ, ಮಜಾ ಟಾಕೀಸಿನ ಗುಂಡುಮಾಮ ,ಕುಸಲ್ದರಸೆ ನವೀನ್.ಡಿ.ಪಡೀಲ್ ಅವರು ಕಾಮೆಂಟರಿಯನ್ನುನೀಡಿದ್ದಾರೆ.
ಬಿಡುಗಡೆಯಾಗಿರುವ ದಿನದಿಂದ ವೈರಲ್ಆಗಿರುವ ‘ಕಂಬುಲಾ-ನನದುಂಬುಲಾ’ ಹಾಡು ಸಾವಿರಾರು ಮಂದಿಯಿಂದ ಪ್ರಶಂಸೆಗೊಳಪಟ್ಟಿದೆ. ಇಷ್ಟೇ ಅಲ್ಲದೆ ಹಾಡಿನ ನಿರ್ದೇಶಕ ಅಕ್ಷಿ್ತ ಶೆಟ್ಟಿಯವರಿಗೂ ಹೊಸ ಕನ್ನಡ ಸಿನಿಮಾ ನಿರ್ದೇಶನದ ಭಾಗ್ಯವನ್ನುಕರುಣಿಸಿದೆ. ‘ಎಲ್ಲಿದ್ದೀರಾ ಯಶ್’ ಸೂಪರ್ ಹಿಟ್ ಹಾಡಿನ ಖ್ಯಾತಿಯ ಡೋಲ್ವಿನ್ಕೊಳಲ್ ಗಿರಿ ‘ಕಂಬುಲಾ-ನನದುಂಬುಲಾ’ಕ್ಕೆಸಂಗೀತ ಸಂಯೋಜಿಸಿದರೆ ಅರ್ಜುನ್ ಲೂವಿಸ್ ಸಾಹಿತ್ಯ ಬರೆದಿದ್ದಾರೆ. ಅಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ, ಕಬೀರ್ ಮಾನವ ಛಾಯಾಗ್ರಹಣದಲ್ಲಿ ಹಾಡಿಗೆ ಪೂರಕವಾಗುವಂತೆ ಚಿತ್ರೀಕರಿಸಿರುವ ದೃಶ್ಯಗಳನ್ನು ಗುರುಪ್ರಸಾದ್ ಪುತ್ತೂರು ಸಂಕಲಿಸಿದ್ದಾರೆ. ಕಂಬಳದಲ್ಲಿ ಪ್ರಸಿದ್ಧರಾದ ಶ್ರೀಕಾಂತ್ ಭಟ್ ನಂದಳಿಕೆ, ಶೇಖರಶೆಟ್ಟಿ ಮಾಳ, ಉದಯ ಶೆಟ್ಟಿ ಕಾಂತಾವರ ಇವರ ಜೊತೆಯಲ್ಲಿ ಕಂಬಳ ಅಭಿಮಾನಿಗಳಾದ ಉದ್ಯಮಿ ಪ್ರಕಾಶ್ ಶೆಟ್ಟಿ ಬಜಗೋಳಿ, ಕೃಷ್ಣ. ಎ.ಶೆಟ್ಟಿ, ಕಿರಣ್ ದೇವಾಡಿಗ ಮತ್ತುಉದಯ್ ಶೆಟ್ಟಿ ಮುನಿಯಾಲು ಈ ಹಾಡಿನ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.