ಬಹುಭಾಷಾ ನಟಿ ಭಾವನಾ ಕನ್ನಡ ಚಿತ್ರ ನಿರ್ಮಾಪಕ ನವೀನ್ ಜೊತೆ ಗುರುವಾರ ವಿವಾಹ ನಿಶ್ಚಿತಾರ್ಥ ಕೊಚ್ಚಿಯಲ್ಲಿ ನಡೆಯಿತು.
ಕನ್ನಡದ ರೋಮಿಯೋ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ಭಾವನಾ ಜತೆಯಾಗಿ ನಟಿಸಿದ್ದು ಈ ಚಿತ್ರವನ್ನು ನವೀನ್ ನಿರ್ಮಿಸಿದ್ದರು. ಅಲ್ಲಿಂದ ಇವರ ನಡುವೆ ಪ್ರೇಮಾಂಕುರವಾಗಿತ್ತು. ನಾಲ್ಕು ವರ್ಷಗಳ ಪ್ರೇಮ ಇದೀಗ ಪ್ರೇಮ ವಿವಾಹಕ್ಕೆ ಸಾಕ್ಷಿಯಾಗಿದೆ.
ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡ ನಟಿ ಭಾವನಾ ಉಭಯ ಕುಟುಂಬಸ್ಥರು ಹಾಗೂ ಚಿತ್ರರಂಗದ ಕೆಲ ಸ್ನೇಹಿತರಿಗಷ್ಟೇ ಆಹ್ವಾನ ನೀಡಿದ್ದರು.