News Kannada
Monday, February 06 2023

ಮನರಂಜನೆ

‘ಪಾದುವ ನಾಟಕೋತ್ಸವ’ದಲ್ಲಿ ಪ್ರದರ್ಶನವಾಗಲಿವೆ ಎರಡು ಅದ್ಧೂರಿ ನಾಟಕಗಳು

Photo Credit :

‘ಪಾದುವ ನಾಟಕೋತ್ಸವ’ದಲ್ಲಿ ಪ್ರದರ್ಶನವಾಗಲಿವೆ ಎರಡು ಅದ್ಧೂರಿ ನಾಟಕಗಳು

ಮಂಗಳೂರಿನ ಕೊಂಕಣಿ ನಾಟಕ ರಂಗದಲ್ಲಿ ನವನವೀನ ಪ್ರಯೋಗಗಳಿಗೆ ಬುನಾದಿ ಹಾಕಿದ ಕ್ರಿಸ್ಟೋಫ್ ನೀನಾಸಂ ಈಗಾಗಲೇ ಹಲವಾರು ನಾಟಕಗಳನ್ನುನಿರ್ದೇಶಿಸಿ, ನಟಿಸಿ ಜೊತೆಗೆ ನೂರಾರು ಪ್ರತಿಭೆಗಳಿಗೆ ನಟನಾ ಮಾರ್ಗದರ್ಶನವನ್ನುನೀಡಿ ಕೊಂಕಣಿ ನಾಟಕರಂಗಕ್ಕೆ ತಮ್ಮ ಕೊಡುಗೆಯನ್ನುನೀಡಿದವರು.


ಈಗ ನಂತೂರಿನಲ್ಲಿರುವ ಪಾದುವಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ನಲ್ಲಿ ರಂಗ ಅಧ್ಯಯನ ಕೇಂದ್ರ ಸ್ಥಾಪಿಸಿ ಅಲ್ಲಿನ ವಿದ್ಯಾರ್ಥಿಗಳನ್ನು ರಂಗಕ್ಕೆ ತರಬೇತುಗೊಳಿಸಿ ಅವರ ಮೂಲಕ ‘ಪಾದುವನಾಟಕೋತ್ಸವ’ಕ್ಕೆ ವಿಭಿನ್ನ ವಾದ ನಾಟಕವನ್ನು ಕಟ್ಟು ವಯೋಜನೆಯನ್ನುಹಾಕಿಕೊಂಡಿದ್ದಾರೆ. ನಾಟಕ ಮತ್ತು ಸಾಹಿತ್ಯದಲ್ಲಿತೀವ್ರ ಉತ್ಸುಕರಾಗಿರುವ ಕಾಲೇಜಿನ ಪ್ರಾಂಶುಪಾಲರಾದ ಫಾ.ಆಲ್ವಿನ್ಸೆ ರಾವೋ ಅವರು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು ಈಗಾಗಲೇ ಹಲವಾರು ಆಂಗ್ಲ ನಾಟಕಗಳನ್ನುಕೊಂಕಣಿಗೆ ಭಾಷಾಂತರಿಸಿದ್ದಾರೆ. ಇದೇ ಮಾರ್ಚ್ 12 ರಂದು ಭಾನುವಾರ ಸಂಜೆ 6.30ಕ್ಕೆ ಕಾಲೇಜಿನ ರಂಗಮಂಟಪದಲ್ಲಿ ನಡೆಯಲಿರುವ ಜಾರ್ಜ್ ಬರ್ನಾರ್ಡ್ ಷಾ ಬರೆದ ನಾಟಕವನ್ನು ಫಾ.ಆಲ್ವೀನ್ಸೆ ರಾವೋ ಅವರು ಕೊಂಕಣಿಯಲ್ಲಿ ‘ಗುಲಾಮಾಂಚೆಶಿಂವ್’ ಹೆಸರಲ್ಲಿ ಭಾಷಾಂತರಿಸಿದ್ದು ,ಕ್ರಿಸ್ಟೋಫರ್ ನೀನಾಸಂ ನಿರ್ದೇಶನದಲ್ಲಿಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ.    

ಮಾರ್ಚ್ 19 ರ ಭಾನುವಾರಸಂಜೆ 6.30ಕ್ಕೆ ಸ್ವತಃ ಫಾ.ಆಲ್ವೀನ್ಸೆ ರಾವೋ ಅವರು ರಚಿಸಿರುವ ಏಕಪಾತ್ರ ಅಭಿನಯ ನಾಟಕ ‘ಪೆದ್ರು’ವಿನಲ್ಲಿ ಕ್ರಿಸ್ಟೋಫರ್ ನೀನಾಸಂ ಅವರು ಅಭಿನಯಿಸಲಿದ್ದಾರೆ. ಧಾರ್ಮಿಕ ಭಾವನೆಗಳ ಸಮ್ಮಿಲನವಾಗಿರುವ ಎರಡು ನಾಟಕಗಳು ಬರಿಯ ರಂಗ ಪ್ರಯೋಗಗಳಾಗದೆ ನೋಡುಗನ ಮನಸ್ಸಿಗೆ ಹತ್ತಿರವಾಗಲಿವೆ. ಎರಡೂ ನಾಟಕಗಳಿಗೆ ಕ್ರಿಸ್ಟೋಫರ್ ಅವರ ನಿರ್ದೇಶನವಿದ್ದ ರೆಕ್ಲ್ಯಾನಿವನ್ ಫೆರ್ನಾಂಡೀಸ್ ಸಹ-ನಿರ್ದೇಶನವಿದೆ. ಎರಡೂ ನಾಟಕಗಳನ್ನು ಮಿಸ್ ಮಾಡದೇ ನೋಡಿದ್ದಲ್ಲಿ ನಿಮ್ಮ ಜ್ಞಾನಭಂಡಾರಕ್ಕೆ ಒಂದಷ್ಟು ಹೊಸ ಸರಕುಗಳು ಗ್ಯಾರಂಟಿ.

See also  ಇನ್ಮುಂದೆ ನನ್ನನ್ನು ‘ತಲ’ ಎಂದು ಕರೆಯಬೇಡಿ: ತಮಿಳು ನಟ ಅಜಿತ್ ಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು