ಬೆಂಗಳೂರು: ಅಭಿಮಾನಿಯೊಬ್ಬರು ಕಿಚ್ಚ ಸುದೀಪ್ ಮತ್ತು ನಟ ದರ್ಶನ್ ನಡುವಿನ ಮನಸ್ತಾಪ ಬಗೆಹರಿಸುವಂತೆ ಹಿರಿಯ ನಟ ಅಂಬರೀಷ್ ಅವರಿಗೆ ಟ್ವೀಟ್ ಮಾಡಿದ್ದು, ಅಭಿಮಾನಿಯ ಟ್ವೀಟ್ಗೆ ಸುಮಲತಾ ಅಂಬರೀಷ್ ಪ್ರತಿಕ್ರಿಯೆ ನೀಡಿದ್ದಾರೆ.
‘ಅವರಿಬ್ಬರೂ ತಮ್ಮ ತಮ್ಮ ನಿರ್ಧಾರಗಳನ್ನು ಸ್ವಂತವಾಗಿಯೇ ತೆಗೆದುಕೊಳ್ಳುವಷ್ಟು ಪ್ರಬುದ್ಧರು. ಅವರ ನಿರ್ಧಾರಗಳನ್ನು ನಾವು ಗೌರವಿಸಬೇಕು ‘ಎಂದು ಅಂಬರೀಷ್ ಅವರ ಪತ್ನಿ ಸುಮಲತಾ ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದ ವೇಳೆ, ಕಿಚ್ಚ ಸುದೀಪ್ ಅವರು ‘ನಾನು ದರ್ಶನ್ ಅನ್ನು ಮೊದಲು ನೋಡಿದಾಗ ಆತ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸಿನಿಮಾದ ಕ್ಲಾಪ್ ಬೋರ್ಡ್ ಹಿಡಿದು ನಿಂತಿದ್ದ. ದರ್ಶನ್ಗೆ ಬಹಳ ಸಂಖ್ಯೆಯ ಮಾಸ್ ಅಭಿಮಾನಿಗಳನ್ನು ನೀಡಿದ ‘ಮೆಜೆಸ್ಟಿಕ್’ ಸಿನಿಮಾ ಮಾಡುವ ಅವಕಾಶ ಮೊದಲಿಗೆ ನನಗೆ ಬಂದಿತ್ತು. ಆದರೆ, ನಾನು ನಿರಾಕರಿಸಿದ್ದ ಕಾರಣ ದರ್ಶನ್ ಅದರಲ್ಲಿ ನಟಿಸಿದ್ದರು’ ಎಂದು ಹೇಳಿದ್ದರು.
ಸುದೀಪ್ ಅವರ ಮಾತಿನಿಂದ ಅಸಮಾಧಾನಗೊಂಡಿರುವ ದರ್ಶನ್, ತಾವು ಮತ್ತು ಸುದೀಪ್ ಚಿತ್ರರಂಗದ ನಟರಷ್ಟೇ. ತಾವು ಸ್ನೇಹಿತರಲ್ಲ ಎಂದು ಹೇಳಿದ್ದರು. ಅಲ್ಲದೆ, ಸುದೀಪ್ ಅವರು ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಬೇಕು’ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.