ಮುಂಬೈ: ಸ್ಯಾಂಡಲ್ ವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲೇ ತನ್ನ ಅದ್ಬುತವಾದ ನಟನೆಯಿಂದ ಅನೇಕ ಅಭಿಮಾನಿಗಳನ್ನು ಪಡೆದಿರುವ ಪ್ರತಿಭಾವಂತ ನಟ ಕಿಚ್ಚ ಸುದೀಪ್ ಮತ್ತೆ ಬಾಲಿವುಡ್ ನಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿಬರುತ್ತಿದೆ.
ಆರು ವರ್ಷಗಳ ನಂತರ ಬಾಲಿವುಡ್ ನಲ್ಲಿ ಅಭಿನಯಿಸುತ್ತಿರುವ ಕಿಚ್ಚ, ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರ `ಟೈಗರ್ ಜಿಂದಾ ಹೇ’ ಚಿತ್ರದಲ್ಲಿ ಸುದೀಪ್ ವಿಲ್ಹನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಜಾಹೀರ್ ಎಂಬ ಪಾಕಿಸ್ತಾನದ ಐಎಸ್ಐ ಏಜೆಂಟ್ ಆಗಿ ಸುದೀಪ್ ಅವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇವರ ಜೊತೆ ಕತ್ರೀನಾ ಕೈಫ್ ಕೂಡ ಎಎಸ್ ಐ ಏಜೆಂಟ್ ಆಗಿ ನಟಿಸಲಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಕನ್ನಡದ ಪ್ರಸಿದ್ದ ಲೇಖಕ ಗಿರೀಶ್ ಕಾರ್ನಾಡ್ ಕೂಡ ಈ ಸಿನಿಮಾದಲ್ಲಿ ಅಭಿನಯುಸುತ್ತಿದ್ದು, 2017ರ ಡಿಸೆಂಬರ್ ನಲ್ಲಿ ತೆರೆಗೆ ಅಪ್ಪಳಿಸಲಿರುವ ಈ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದಾರೆ.