ಬೆಂಗಳೂರು: ಪೂರಿ ಜಗನ್ನಾಥ್ ನಿರ್ದೇಶನದ ಬಹುನಿರೀಕ್ಷೆಯ ಚಿತ್ರ ‘ರೋಗ್’ ಗೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ದೊರೆತಿದ್ದು, ಮಾರ್ಚ್ 29 ಯುಗಾದಿ ಹಬ್ಬಕ್ಕೆ ಬಿಡುಗಡೆಯಾಗಲಿದೆ.
‘ರೋಗ್’ ಏಕಕಾಲಕ್ಕೆ ವಿಶ್ವದಾದ್ಯಂತ ೧೦೦೦ ಚಿತ್ರಮಂದಿರಗಳಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ಸುಮಾರು 15 ವರ್ಷಗಳ ನಂತರ ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ್ದು, ನಿರ್ಮಾಪಕ ಸಿ ಆರ್ ಮನೋಹರ್ ಅವರ ಸೋದರಳಿಯ ಇಶಾನ್ ಈ ಸಿನೆಮಾದಲ್ಲಿ ಪಾದಾರ್ಪಣೆ ಮಾಡಿದ್ದಾರೆ.
ಮುಖೇಶ್ ಜೆ ಅವರ ಛಾಯಾಗ್ರಹಣ, ಸುನಿಲ್ ಕಶ್ಯಪ್ ಸಂಗೀತವಿರುವ ಈ ಚಿತ್ರದಲ್ಲಿ ಮನ್ನಾರ ಚೋಪ್ರಾ, ಏಂಜೆಲಾ ಕ್ರಿಸಿನ್ಸ್ಕಿ, ಠಾಕೂರ್ ಅನೂಪ್ ಸಿಂಗ್ ಅಭಿನಯಿಸಿದ್ದಾರೆ.