ಮುಂಬಯಿ: ನಟಿ ರವೀನಾ ಟಂಡನ್ ಕಮ್ ಬ್ಯಾಕ್ ಸಿನಿಮಾ ಮಾತ್ರ್ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ನಿರ್ದೇಶಕ ಅಷ್ಟರ್ ಸಾಯಿದ್ ರವೀನಾ ಟಂಡನ್ ನಟನೆಯ ಭಾವನಾತ್ಮಕ ಸನ್ನಿವೇಶಗಳನ್ನು ಚಿತ್ರೀಕರಿಸುತ್ತಿದ್ದು, ತನ್ನ ಸಹನಟ ಮಧುರ್ ಮಿತ್ತಲ್ ಕೆನ್ನೆಗೆ ಈ ಸಂದರ್ಭ ರವೀನಾ ಹೊಡೆದಿದ್ದಾರೆ.
ಮಧುರ್ ಮಿತ್ತಲ್ ಕೆನ್ನೆಗೆ ಭಾರಿಸಲು ನಿರ್ದೇಶಕ ಸಾಯೀದ್ ಭಾವನಾತ್ಮಾಕ ಸನ್ನಿವೇಶ ನೈಜವಾಗಿ ಮೂಡಿ ಬರಬೇಕೆಂಬ ಉದ್ದೇಶದಿಂದ ನಟಿ ರವೀನಾಗೆ ಹೇಳಿದ್ದು, ಮೊದಲು ರವೀನಾ ಇದಕ್ಕೆ ಒಪ್ಪಲಿಲ್ಲ. ಆದರೆ ನಿರ್ದೇಶಕರು ಆಕೆಯ ಮನವೊಲಿಸಿದ ಬಳಿಕ ಮಧುರ್ ಕೆನ್ನೆಗೆ ರವೀನಾ ಹೊಡೆದಿದ್ದಾರೆ.
ಮಾತ್ರ್ ಸಿನಿಮಾ ಏಪ್ರಿಲ್ 21 ರಂದು ರಿಲೀಸ್ ಆಗಲಿದ್ದು, ಕೆಲ ಸನ್ನಿವೇಶಗಳಲ್ಲಿ ನಕಲಿ ಮಾಡುವುದಕ್ಕಿಂತ ನೈಜವಾಗಿ ಚಿತ್ರೀಕರಿಸಿದರೇ ಅದರ ಎಫೆಕ್ಟ್ ಚೆನ್ನಾಗಿರುತ್ತೆ ಎಂದು ನಿರ್ದೇಶಕ ಸಾಯಿದ್ ಹೇಳಿದ್ದಾರೆ.