ಮೈಸೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ “ವೀಕೆಂಡ್ ವಿತ್ ರಮೇಶ್” ಸೀಸನ್ 3ನಲ್ಲಿ ಈ ವಾರದ ಅತಿಥಿಯಾಗಿ ನವರಸ ನಾಯಕ ಜಗ್ಗೇಶ್ ಕಾಣಿಸಿಕೊಳ್ಳಲಿದ್ದು, ಈ ಶೋ ರದ್ದು ಮಾಡುವಂತೆ ಕಾಂಗ್ರೆಸ್ ಮನವಿ ಮಾಡಿದೆ.
ನಂಜನಗೂಡು, ಗುಡ್ಲುಪೇಟೆ ಉಪ ಚುನಾವಣೆ ಹಿನ್ನೆಲೆ ನಟ ಜಗ್ಗೇಶ್ ಟಿವಿ ಶೋಗೆ ನಿರ್ಬಂಧ ಹೇರುವಂತೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಜಗ್ಗೇಶ್ ಬಿಜೆಪಿ ಮುಖಂಡರಾಗಿದ್ದು, ಉಪ ಚುನಾವಣೆ ಪ್ರಚಾರದಲ್ಲೂ ಭಾಗವಹಿಸಿದ್ದು, ಮತದಾರರ ಮೇಲೆ ಜಗ್ಗೇಶ್ ಕಾರ್ಯಕ್ರಮ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ವಾರದ ವೀಕೆಂಡ್ ಶೋ ರದ್ದು ಮಾಡುವಂತೆ ಈ ಹಿನ್ನೆಲೆ ಕಾಂಗ್ರೆಸ್ ಮನವಿ ಮಾಡಿದ್ದು, ನಂಜನಗೂಡು ತಾಲೂಕಿನ ಕಚೇರಿಯಲ್ಲಿ ಈ ಸಂಬಂಧ ದೂರು ನೀಡಲು ಮುಖಂಡರು ತೆರಳಿದ್ದಾರೆ.