ತುಳುಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರನ್ನು ಜೊತೆ ಸೇರಿಸಿ, ಒಗ್ಗಟ್ಟಿನಲ್ಲಿ ತುಳುಚಿತ್ರರಂಗವನ್ನು ಕಟ್ಟುವ ನಿಟ್ಟಿನಲ್ಲಿ ರೂಪಿಸಿದ ಕೋಸ್ಟಲ್ ವುಡ್ ಅರ್ಟಿಸ್ಟ್ ಅ್ಯಂಡ್ ಟೆಕ್ನಿಷಿಯನ್ಸ್ ಕಲ್ಚರಲ್ ಅಸೋಸಿಯೇಷನ್ ಮಂಗಳೂರು (CATCA) ಇದರ ವತಿಯಿಂದ ಇದೇ ಏಪ್ರಿಲ್ 4 ರಿಂದ 8 ರವರೆಗೆ ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ (CPL) ಕ್ರಿಕೆಟ್ ಮ್ಯಾಚ್ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದ್ದು,ಇದರಲ್ಲಿ ಕೋಸ್ಟಲ್ ವುಡ್ ಕಲಾವಿದರು ಮತ್ತು ತಂತ್ರಜ್ಞರ ಎಂಟು ತಂಡಗಳು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಲಿವೆ.
ಈ ಎಂಟು ತಂಡಗಳಿಗೆ ಐಕಾನ್ ಪ್ಲೇಯರ್ ಗಳಾದ ತುಳು ಚಿತ್ರರಂಗದ ನಟರಾದ ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ, ಸೌರಭ್ ಭಂಡಾರಿ, ಶ್ರವಣ್ ಕುಮಾರ್ ಕದ್ರಿ, ಪ್ರಕಾಶ್ ಧರ್ಮನಗರ, ಅನೂಪ್ ಸಾಗರ್, ಪೃಥ್ವಿ ಅಂಬರ್ ಹಾಗು ಆಸ್ತಿಕ್ ಶೆಟ್ಟಿ ಆಯ್ಕೆಯಾಗಿದ್ದು, ತುಳು ಚಿತ್ರರಂಗದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ನಡೆಯಲಿರುವ ಈ ಕ್ರಿಕೆಟ್ ಸಂಭ್ರಮಕ್ಕೆ ಸ್ಯಾಂಡಲ್ ವುಡ್ ಸ್ಟಾರುಗಳಾದ ರಾಕಿಂಗ್ ಸ್ಟಾರ್ ಯಶ್, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ ಹಾಗೂ ಶ್ರೀನಗರ ಕಿಟ್ಟಿ ಆಗಮಿಸಲಿದ್ದು CPL ಸಂಭ್ರಮಕ್ಕೆ ತಾರಾಮೆರುಗನ್ನು ನೀಡಲಿದ್ದಾರೆ. ಅಶ್ವಿನಿ.ಜಿ.ಕೋಟ್ಯಾನ್ CATCA (ಕಾಟ್ಕಾ)ನ ಅಧ್ಯಕ್ಷರಾಗಿದ್ದು, ಪ್ರಕಾಶ್ ಧರ್ಮನಗರ ಸಂಚಾಲಕ,ರಾಜೇಶ್ ಬಂದ್ಯೋಡು ಉಪಾಧ್ಯಕ್ಷ, ರಾಜೇಶ್ ಸ್ಕೈಲಾರ್ಕ್ ಪ್ರಧಾನ ಕಾರ್ಯದರ್ಶಿ, ಮಹಮ್ಮದ್ ಅಸ್ಗರ್ ಸಂಘಟನ ಕಾರ್ಯದರ್ಶಿ, ಜೊತೆ ಕಾರ್ಯದರ್ಶಿಯಾಗಿ ದಿವ್ಯ ಹಾಗೂ ಖಜಾಂಚಿಯಾಗಿ ವಿನಾಯಕ್ ಹುದ್ದೆದಾರರಾಗಿದ್ದು ಸಂಘಟನೆಯ ಲವಲವಿಕೆಗೆ ಕಾರಣೀಭೂತರಾಗಿದ್ದಾರೆ.
ಬೆಳಗ್ಗೆ10 ರಿಂದ ಸಂಜೆ 5 ರವರೆಗೆ ನಡೆಯಲಿರುವ ನಾಲ್ಕು ದಿನದ ಅದ್ಧೂರಿ ಕ್ರೀಡಾಕೂಟದ ಜೊತೆಯಲ್ಲಿ CPL ನ ಕೊನೆಯ ದಿನದಂದು ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ನೋಡುಗರಿಗೆ ಮನರಂಜನೆಯ ರಸದೌತಣವೇ ಸಿಗಲಿದೆ.