ಮೈಸೂರು: ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಬೇಸಿಗೆ ರಜದ ಮಜಕ್ಕಾಗಿ ಏ.22 ರಂದು ನಗರದ ಖಾಸಗಿ ಹೋಟೆಲ್ನಲ್ಲಿ ಅರ್ಜುನ್ ಜನ್ಯ ಮ್ಯೂಸಿಕಲ್ ಎಕ್ಸ್ಟ್ರಾವಂಗಾಜಾ ನೈಟ್ಸ್ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದಾಗಿ ಸ್ವತಹ ಅರ್ಜುನ್ ಜನ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ಅರ್ಜುನ್ ಜನ್ಯ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಏ.22 ರಂದು ಖಾಸಗಿ ಹೋಟೆಲ್ನ ಮೈದಾನದಲ್ಲಿ ಅರ್ಜುನ್ ಜನ್ಯ ಮ್ಯೂಸಿಕಲ್ ಎಕ್ಸ್ಟ್ರಾವಂಗಾಜಾ ನೈಟ್ಸ್ ಆಯೋಜಿಸಿದ್ದು, ಈ ಮ್ಯೂಸಿಕಲ್ ನೈಟ್ಸ್ನಲ್ಲಿ ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಹಾಡಲಿದ್ದು ಇವರ ಜೊತೆ ವ್ಯಾಸರಾಜ್, ಇಂದು ನಾಗರಾಜ್, ಸಂತೋಷ್ ವೆಂಕಿ, ಅನುರಾಧ ಭಟ್, ಚಂದನ್ ಶೆಟ್ಟಿ ಹಾಗೂ ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 10 ಹಾಗೂ 11ರ ವಿಜೇತರು ಹಾಡಲಿದ್ದಾರೆ ಹಾಗೂ ನಿರೂಪಕಿ ಅನುಶ್ರೀ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ ಎಂದರು. ರಾತ್ರಿ 7ಘಂಟೆಗೆ ಸಂಗೀತ ಕಾರ್ಯಕ್ರಮ ಆರಂಭವಾಗಲಿದ್ದು, ಕಾರ್ಯಕ್ರಮದ ಪ್ರವೇಶ ಶುಲ್ಕವು 399ರೂ, 799ರೂ ಮತ್ತು 1099 ರೂಗಳಿದ್ದು ಹಾಗೂ ಪ್ರೇಕ್ಷಕರಿಗೆ ತಿಂಡಿ ತಿನಿಸುಗಳು ಮತ್ತು ಪಾನಿಯಗಳ ವ್ಯವಸ್ಥೆ ಇರುತ್ತವೆ ಎಂದರು.