ಬಹುನೀರಿಕ್ಷಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾ ಮೈಸೂರು ನಗರದ ಮಾಲ್ ನಲ್ಲಿ ಒಂದೇ ದಿನಕ್ಕೆ 18 ಪ್ರದರ್ಶನದ ವ್ಯವಸ್ಥೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದು ಮೊದಲ ಬಾರಿಗೆ ಮೈಸೂರಿನಲ್ಲಿ ಮಧ್ಯರಾತ್ರಿ ಪ್ರದರ್ಶನ ಕಂಡ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.
ರಾಜ್ಯದ್ಯಾಂತ ಇಂದಿನಿಂದ ತೆರೆ ಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಚಕ್ರವರ್ತಿ ಸಿನಿಮಾ ಮೈಸೂರಿನ ಡಿಆರ್ ಸಿ ಚಿತ್ರಮಂದಿದರಲ್ಲಿ ನಾಲ್ಕು ಸ್ಕ್ರೀನ್ ಗಳಲ್ಲಿ ಒಂದೇ ದಿನ 18 ಪ್ರದರ್ಶನ ಕಾಣುತ್ತಿದ್ದು, ಮಧ್ಯರಾತ್ರಿ 12.30ಕ್ಕೆ ಮೊದಲ ಪ್ರದರ್ಶನ ಏರ್ಪಡಿಸಿದ್ದು ಅಭಿಮಾನಿಗಳು ರಾತ್ರಿಯಿಂದಲೇ ಟಿಕೆಟ್ ಖರೀದಿಗಾಗಿ ಚಿತ್ರ ನೋಡಲು ಒಂದು ವಾರದ ಹಿಂದಿನಿಂದಲ್ಲೇ ಟಿಕೆಟ್ ಬುಕ್ ಮಾಡಲಾಗಿತ್ತು.
ಚಕ್ರವರ್ತಿ ಸಿನಿಮಾದ ಮೊದಲ ಪ್ರದರ್ಶನವನ್ನು ಮಧ್ಯರಾತ್ರಿ ವೀಕ್ಷಣೆ ಮಾಡಿದ ಅಭಿಮಾನಿಗಳು ಚಿತ್ರಮಂದಿರದೊಳಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಈ ಚಕ್ರವರ್ತಿ ಸಿನಿಮಾದ ಶೂಟಿಂಗ್ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆರಂಭವಾಗಿ ಚಾಮುಂಡಿ ಬೆಟ್ಟದಲ್ಲಿ ಕುಂಬಳಕಾಯಿ ಒಡೆಯುವ ಮೂಲಕ ಮೈಸೂರಿನಲ್ಲೇ ಮುಕ್ತವಾಗಿತ್ತು.