ಚೆನ್ನೈ: ನನ್ನನ್ನು ಒಬ್ಬ ಉತ್ತಮ ನಟ ಎಂದು ಹಿರಿಯ ನಿರ್ದೇಶಕ ಭಾರತೀರಾಜಾ ಯಾವತ್ತೂ ಒಪ್ಪಿಕೊಂಡಿಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ.
ಭಾರತೀರಾಜಾ ಅವರನ್ನು ನಾನು ತುಂಬಾ ಇಷ್ಟ ಪಡುತ್ತೇನೆ, ನಾನೆಂದರೇ ಅವರಿಗೂ ಅಚ್ಚು ಮೆಚ್ಚು, ಪತ್ರಕರ್ತರು ನನ್ನ ಬಗ್ಗೆ ಅವರ ಹಿಂದಿನ ಸಂದರ್ಶನಗಳಲ್ಲಿ ಅವರ ಅಭಿಪ್ರಾಯ ಕೇಳಿದಾಗ, ಅವರೊಬ್ಬ ಉತ್ತಮ ಮನುಷ್ಯ ಎಂದು ಹೇಳಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ನಿರ್ದೇಶಕ ಭಾರತೀರಾಜಾ ಅವರ ಮುಂದಿನ 16 ವಯದಿನಿಲೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ರಜನಿಕಾಂತ್ ಭಾರತೀರಾಜಾ ಇಂಟರ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಸಿನಿಮಾ ಸಂಸ್ಥೆ ಉದ್ಘಾಟಿಸಿ ಮಾತನಾಡಿದ್ದು, ನಾನೊಬ್ಬ ಉತ್ತಮ ಕಲಾವಿದ ಎಂಬುದನ್ನು ಭಾರತೀರಾಜಾ ಒಪ್ಪಿಕೊಂಡಿಲ್ಲ, ನಾನು ಯಾವಾಗಲೂ ಇದನ್ನು ತಲೆಯಲ್ಲಿಟ್ಟುಕೊಂಡು, ಜನ ಹೇಗೆ ನನ್ನನ್ನು ನಟ ಎಂದು ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿಕೊಳ್ಳುತ್ತಿದ್ದೆ ಎಂದಿದ್ದಾರೆ.
ನಾನು ನನ್ನ ಗುರು ದಿವಂಗತ ಕೆ.ಬಾಲಚಂದರ್ ಅವರಿಂದ ಬಹಳಷ್ಟು ಕಲಿತಿದ್ದೇನೆ ಮತ್ತು ನಾನು ಇದೇ ಸಂಸ್ಥೆಯ ವಿದ್ಯಾರ್ಥಿ, 40 ದಶಕಗಳ ಸುದೀರ್ಘ ಸಿನಿಮಾ ವೃತ್ತಿ ಜೀವನದಲ್ಲಿ ಭಾರತೀರಾಜಾ ಕೇವಲ ಎರಡು ಬಾರಿ ಮಾತ್ರ ನನ್ನ ಸಮಯ ಕೇಳಿದ್ದು, ಮೊದಲಯನೆಯದು 16 ವಯದಿನಿಲೆ ಸಿನಿಮಾಗಾಗಿ, 2ನೇ ಯದು ಸಿನಿಮಾ ಸಂಸ್ಥೆ ಉದ್ಘಾಟನೆಗೆ ಬರುವಂತೆ ಆಹ್ವಾನಿಸಿದ್ದರು ಎಂದು ರಜನಿಕಾಂತ್ ಹೇಳಿದ್ದಾರೆ.