ಮುಂಬೈ: ಭಾರತ ಚಿತ್ರರಂಗದ ಹೆಸರಾಂತ ಚಿತ್ರ ‘ಬಾಹುಬಲಿ’ ಚಿತ್ರದ ನಾಯಕ ನಟ ಪ್ರಭಾಸ್ ಅವರನ್ನು ಬಾಲಿವುಡ್ಗೆ ಕರೆತರಲು ಕರಣ್ ತುಂಬಾ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಗ್ ಬ್ಯಾನರ್ ಗಳ ಅಡಿಯಲ್ಲಿ ಬಂದ ಹಲವು ದೊಡ್ಡ ಆಫರ್ ಗಳನ್ನು ಪ್ರಭಾಸ್ ನಿರಾಕರಿಸಿದ್ದು, ಕಳೆದ ಐದು ವರ್ಷಗಳಿಂದ ಪ್ರಭಾಸ್ ಕೇವಲ ಬಾಹುಬಲಿ ಕಡೆ ತಮ್ಮ ಗಮನವನ್ನೆಲ್ಲಾ ಕೇಂದ್ರೀಕರಿಸಿದ್ದರು.
ಬಾಹುಬಲಿ-2 ಸಿನಿಮಾ ಪೂರ್ಣವಾಗಿರುವ ಹಿನ್ನೆಲೆ ಪ್ರಬಾಸ್ ಅವರನ್ನು ಬಾಲಿವುಡ್ ಗೆ ಕರೆತರಲು ಕರಣ್ ಜೋಹರ್ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಮಾಧ್ಯಮಗಳು ಕರಣ್ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ ಒಂದು ದಿನ ನಾನೇ ಈ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ತಿಳಿಸಿದ್ದಾರೆ.
ನಿರ್ದೇಶಕ ರಾಜಮೌಳಿ ಅವರಿಗೆ ನಟ ಪ್ರಭಾಸ್ ಅವರ ಮನವೊಲಿಸುವಂತೆ ಕರಣ್ ಬೆನ್ನು ಬಿದ್ದಿದ್ದಾರೆ ಎಂದು ಹೇಳಲಾಗಿದ್ದು, ಹಿಂದಿ ಚಿತ್ರ ಮಾಡುವಂತೆ ನಿರ್ದೇಶಕ ರಾಜಮೌಳಿಗೆ ಕರಣ್ ಸಾಕಷ್ಟು ಹುರಿದುಂಬಿಸುತ್ತಿದ್ದು, ಹಾಗೆಯೇ ಚಿತ್ರದ ನಾಯಕನಾಗಿ ಪ್ರಭಾಸ್ ಅವರನ್ನು ಬಾಲಿವುಡ್ನಲ್ಲಿ ಭರ್ಜರಿ ಎಂಟ್ರಿ ಮಾಡಿಸುವ ಪ್ಲ್ಯಾನ್ ಕೂಡ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.