News Kannada
Wednesday, October 05 2022

ಮನರಂಜನೆ

ಬಾಲ್ಯವಿವಾಹದ ಸುತ್ತ ಜೀರ್ಜಿಂಬೆ ಚಿತ್ರ ಗಿರಕಿ - 1 min read

Photo Credit :

ಬಾಲ್ಯವಿವಾಹದ ಸುತ್ತ ಜೀರ್ಜಿಂಬೆ ಚಿತ್ರ ಗಿರಕಿ

ಬಾಲ್ಯ ವಿವಾಹದ ಕಥಾವಸ್ತು ಮುಂದಿಟ್ಟುಕೊಂಡು ಜೀರ್ಜಿಂಬೆ ಚಿತ್ರವನ್ನು ತಯಾರಿಸಲಾಗಿದೆ ಎಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕಾರ್ತಿಕ್ ಸರಗೂರು ಹೇಳಿದ್ದಾರೆ.

ಎಚ್.ಡಿ.ಕೋಟೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಥೆ 2010ರಲ್ಲೇ ಸಿದ್ಧ್ದವಾದರೂ ಅದಕ್ಕಾಗಿ 120ಕ್ಕೂ ಹೆಚ್ಚು ಶಾಲೆಗಳಿಗೆ ಹೋಗಿ 1500 ಮಕ್ಕಳನ್ನು ಸಂದರ್ಶನ ಮಾಡಿ ಹಲವು ವಿಷಯಗಳನ್ನು ಚಿತ್ರದಲ್ಲಿ ಅಳವಡಿಸಲಾಗಿದೆ.

ಯಾವುದೇ ಒಬ್ಬ ವ್ಯಕ್ತಿ ಕ್ರಿಯಾಶೀಲತೆಯಿಂದ ಕೆಲಸ ಮಾಡಬೇಕಾದರೆ ತಾನು ಹುಟ್ಟಿ ಬೆಳೆದ ಪರಿಸರವೇ ಮೂಲದ್ರವ್ಯವಾಗುತ್ತದೆ. ಏಕೆಂದರೆ ತಾನು ಬೆಳೆದ ಪರಿಸರದಲ್ಲಿ ಪಡೆದಂತಹ ಅನುಭವ ಕೂಡ ಅವರ ಮುಂದಿನ ಕೆಲಸದಲ್ಲಿ ಸಹಕಾರಿಯಾಗುತ್ತದೆ.

ಹಳ್ಳಿಗಾಡಿನಲ್ಲಿ ಇಬ್ಬರು ಹೆಣ್ಣು ಮಕ್ಕಳು ತಮ್ಮ ಶಾಲೆಯಲ್ಲಿ ನೀಡುವ ಸೈಕಲ್ ಕುರಿತು ಮಾತನಾಡಿದ್ದನ್ನು ಕೇಳಿದೆ. ಆ ಹೆಣ್ಣು ಮಕ್ಕಳಲ್ಲಿ ಒಂದು ಸೈಕಲ್ ಹೇಗೆ ಬದಲಾವಣೆ ತಂದು ಅವರಲ್ಲಿ ಸ್ವಾತಂತ್ರ್ಯ ಮತ್ತು ಚಲನಶೀಲತೆವುಂಟಾಗುತ್ತದೆ. ಆದರೆ ಅಪ್ರಾಪ್ತ ವಯಸ್ಸಿಗೆ ಮದುವೆ ಮಾಡಿ ಉತ್ತಮವಾಗಿ ಅರಳಬೇಕಾದ ಅವರ ಜೀವನವನ್ನು ಮೊಟುಕುಗೊಳಿಸಲಾಗುತ್ತದೆ. ದೇಶದಲ್ಲಿ ಬಾಲ್ಯ ವಿವಾಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಇದೇ ಕಥೆಯನ್ನು ಆಧಾರಿಸಿ ಜೀರ್ಜಿಂಬೆ ಚಿತ್ರವನ್ನು ತಯಾರಿಸಲಾಗಿದೆ. ಈ ಕಥೆಯನ್ನು 2010 ರಲ್ಲೆ ಸಿದ್ದವಾದರೂ ಅದಕ್ಕಾಗಿ 120 ಕ್ಕೂ ಹೆಚ್ಚು ಶಾಲೆಗಳಿಗೆ ಹೋಗಿ 1500 ಮಕ್ಕಳನ್ನು ಸಂದರ್ಶನ ಮಾಡಿ ಹಲವು ವಿಷಯಗಳನ್ನು ಚಿತ್ರದಲ್ಲಿ ಅಳವಡಿಸಲಾಗಿದೆ ಎಂದರು.

ನಮ್ಮ ಮಾವ ಗೋಪಿನಾಥ್ ರಂಗಭೂಮಿ ಕಲಾವಿದರಾದ್ದರಿಂದ ನಾನು 4ನೇ ತರಗತಿಯಲ್ಲಿದ್ದಾಗ ನಾಟಕಗಳಲ್ಲಿ ಅಭಿನಯಿಸಲು ಬಣ್ಣ ಹಚ್ಚಿದರು, ಆಗ ಯಾವುದೇ ಅಳುಕಿಲ್ಲದೆ ಧೆೈರ್ಯದಿಂದ ಸಾವಿರಾರು ಜನರ ಮುಂದೆ ಅಭಿನಯಿಸಿದ್ದರಿಂದಾಗಿ ನನಗೆ ನಟನೆ ಮತ್ತು ಸಿನಿಮಾ ಬಗ್ಗೆ ಆಸಕ್ತಿವುಂಟಾಯಿತು. ಜೀರ್ಜಿಂಬೆ ಚಿತ್ರಕ್ಕೆ ನಾಲ್ಕು ರಾಜ್ಯ ಪ್ರಶಸ್ತಿಗಳು ಬಂದಿದ್ದು, ರಾಷ್ಟ್ರ ಮತ್ತು ಅಂತರರಾಷ್ಟ್ರೀಯದ 30ಕ್ಕೂ ಚಿತ್ರೋತ್ಸವಗಳ ಪ್ರದರ್ಶನಕ್ಕೆ ಕಳುಹಿಸಲಾಗಿದೆ. ಈ ಚಿತ್ರವನ್ನು ಪ್ರೌಢಶಾಲಾ ಮಟ್ಟದ ಎಲ್ಲಾ ಹೆಣ್ಣು ಮಕ್ಕಳು ನೋಡಬೇಕಾದ ಚಿತ್ರವಾಗಿದ್ದು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.

See also  14 ಕೆ.ಜಿ ಅಪ್ಪಟ ಬಂಗಾರದ ಲೆಹೆಂಗಾ ಧರಿಸಿದ 'ಓಂ ನಮೋ ವೆಂಕಟೇಶಾಯ' ಚಿತ್ರದ ನಾಯಕಿ !
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು