ಮುಂಬೈ: ಬಾಲಿವುಡ್ ನಟಿ ಸಾಗರಿಕಾ ಘಾಟ್ಕೆ ಜೊತೆ ಟೀಂ ಇಂಡಿಯಾದ ಮಾಜಿ ವೇಗಿ ಹಾಗೂ ಐಪಿಎಲ್ ದೆಹಲಿ ತಂಡದ ನಾಯಕತ್ವ ವಹಿಸಿರುವ ಜಹೀರ್ ಖಾನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ವಿಷಯವನ್ನು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದು, ಸಾಗರಿಕಾ ಜೊತೆಗಿರುವ ಫೋಟೋವನ್ನು ಜಹೀರ್ ಪೋಸ್ಟ್ ಮಾಡಿದ್ದು, ನಿಮ್ಮ ಪತ್ನಿಯ ಆಯ್ಕೆ ಬಗ್ಗೆ ಹಾಸ್ಯ ಮಾಡಬೇಡಿ. ನೀವು ಕೂಡ ಅದರಲ್ಲಿ ಒಬ್ಬರು ಎಂದು ಟ್ವೀಟ್ ಮಾಡಿದ್ದಾರೆ.