NewsKarnataka
Tuesday, November 23 2021

ಮನರಂಜನೆ

ಅಪಘಾತದಲ್ಲಿ ಕನ್ನಡದ ಕಿರುತೆರೆ ನಟಿ ರೇಖಾ ಸಿಂಧು ಸಾವು

ಅಪಘಾತದಲ್ಲಿ ಕನ್ನಡದ ಕಿರುತೆರೆ ನಟಿ ರೇಖಾ ಸಿಂಧು ಸಾವು

ಚೆನ್ನೈ: ತಮಿಳುನಾಡಿನ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ರೂಪದರ್ಶಿ ಹಾಗೂ ಕನ್ನಡದ ಕಿರುತೆರೆ ನಟಿ ರೇಖಾ ಸಿಂಧು ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ತಮಿಳುನಾಡಿನ ಪೆರ್ನಾಂಬತ್’ನ ಸುನ್ನಾಂಪುಕುಟ್ಟೈ ಪ್ರದೇಶದಲ್ಲಿ ನಟಿ ರೇಖಾ ಸಿಂಧು ಕಾರಿನಲ್ಲಿ ಚಲಿಸುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ರೇಖಾ ಹಾಗೂ ಇನ್ನಿತರೆ ಮೂವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ರೇಖಾ ಸಿಂಧು ಅವರು ಕನ್ನಡದ ಕಿರುತರೆ ನಟಿಯಾಗಿದ್ದು, ತಮ್ಮ ಉತ್ತಮ ನಟನೆ ಮೂಲಕ ತಮಿಳು ಕಿರುತೆರೆಯಲ್ಲಿಯೂ ಹೆಸರು ಮಾಡಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!