ಸ್ಟಾರ್ ನಟ ನಟಿಯರನ್ನು ಅಭಿಮಾನಿಗಳು ಭೇಟಿ ಮಾಡಲು ಬಯಸುತ್ತಾರೆ. ಅಷ್ಟೇ ಏಕೆ ತಮ್ಮ ನೆಚ್ಚಿನ ನಟ ಒಮ್ಮೆ ಸಿಕ್ರೆ ಅವರ ಜತೆ ಫೋಟೋ, ಸೆಲ್ಫಿ ತೆಗೆಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಅಂತಹದರಲ್ಲಿ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ತನ್ನ ಅಭಿಮಾನಿಯೋರ್ವನನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಹೌದು, ಸುದೀಪ್ ಅವರು ಹೀಗೆ ಬಯಸುವುದಕ್ಕೆ ಕಾರಣ ಕಿಚ್ಚನ ಅಭಿಮಾನಿಯ ಪ್ರೇಮ.
ಬೆಳಗಾವಿಯ ಸುದೀಪ್ ಅಭಿಮಾನಿ ರಮೇಶ್ ಎಂಬಾತ ತನ್ನ ನೆಚ್ಚಿನ ನಟನ ಚಿತ್ರದ ಹೆಸರು, ಸುದೀಪ್ ತಂದೆ ತಾಯಿಯ ಹೆಸರನ್ನು ತನ್ನ ಮೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಇದನ್ನು ಟ್ವಿಟರ್ನಲ್ಲಿ ನೋಡಿದ ಸುದೀಪ್, ಅಭಿಮಾನಿಯ ಈ ಪ್ರೇಮಕ್ಕೆ ಮೂಕ ವಿಸ್ಮಿತರಾಗಿದ್ದಾರೆ. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಕಿಚ್ಚ, ಈತನ ಅಭಿಮಾನವನ್ನು ವರ್ಣಿಸಲು ಪದಗಳು ಸಿಗುತ್ತಿಲ್ಲ. ಈತನನ್ನು ಒಮ್ಮೆ ಭೇಟಿಯಾಗಲು ಬಯಸುತ್ತೇನೆ ಎಂದಿದ್ದಾರೆ.