ಕೆಂಡ ಸಂಪಿಗೆ ಬೆಡಗಿ ಮಾನ್ವಿತಾ ಹರೀಶ್ ಹೊಸ ಪ್ರಯೋಗಕ್ಕೆ ಸಿದ್ಧವಾಗಿದ್ದಾರೆ. ತಾರಕಾಸುರ ಚಿತ್ರದಲ್ಲಿ ಮಾನ್ವಿತಾ ಮೊದಲ ಬಾರಿಗೆ ಎರಡು ವಿಭಿನ್ನ ಶೇಡ್ ಗಳಿರುವ ಪಾತ್ರ ನಿರ್ವಹಿಸುತ್ತಿದ್ದಾರೆ.
ವೈಭವ್ ಎನ್ನುವ ಹೊಸ ನಟ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡ್ತಿದ್ದಾರೆ. ಈ ಚಿತ್ರ ಮತ್ತೊಂದು ‘ರಥಾವರ’ ಆಗಲಿದೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ವೈಭವ್ಗೆ ನಾಯಕಿಯಾಗಿ ಅಭಿನಯಿಸಲಿರುವ ಮಾನ್ವಿತಾ ಹರೀಶ್ ಜೂನ್ 25ರಿಂದ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಈಗಾಗ್ಲೇ ಶೃತಿ ಹರಿಹರನ್ ತಾರಕಾಸುರ ಟೀಂನಲ್ಲಿದ್ದಾರೆ. ಜೊತೆಗೆ ಚಿತ್ರದ ಟೀಸರ್ ಕೂಡಾ ಸಾಕಷ್ಟು ಸದ್ದು ಮಾಡ್ತಿದೆ.ಚಂದ್ರಶೇಖರ್ ಬಂಡಿಯಪ್ಪ ‘ತಾರಕಾಸುರ’ನ ನಿರ್ದೇಶಕ. ಈ ಚಿತ್ರವನ್ನು ಕರ್ನಾಟಕ ಚಲನಚಿತ್ರ ಮಂಡಳಿ ಕಾರ್ಯದರ್ಶಿ ನರಸಿಂಹುಲು ನಿರ್ಮಿಸುತ್ತಿದ್ದಾರೆ. ಅಂದ್ಹಾಗೆ ನಾಯಕ ವೈಭವ್ ನರಸಿಂಹಲು ಅವರ ಪುತ್ರ. ಚಿತ್ರಕ್ಕೆ ಧರ್ಮ ವಿಶ್ ಸಂಗೀತ ನೀಡುತ್ತಿದ್ದು, ಕುಮಾರ್ ಗೌಡ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.