News Kannada
Friday, September 30 2022

ಮನರಂಜನೆ

ಮಲಯಾಳಂ ನಟಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಸುಳ್ಳುಪತ್ತೆ ಪರೀಕ್ಷೆಗೆ ಸಿದ್ಧ ಎಂದ ನಟ ದಿಲೀಪ್ - 1 min read

Photo Credit :

ಮಲಯಾಳಂ ನಟಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಸುಳ್ಳುಪತ್ತೆ ಪರೀಕ್ಷೆಗೆ ಸಿದ್ಧ ಎಂದ ನಟ ದಿಲೀಪ್

ಕೊಚ್ಚಿ: ಮಲಯಾಳಂ ಪ್ರಸಿದ್ಧ ನಟಿ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಆರೋಪ ಕೇಳಿ ಬಂದಿರುವ ನಟ ದಿಲೀಪ್ ತಾವು ಸುಳ್ಳು ಪತ್ತೆ ಪರೀಕ್ಷೆಗೆ ಸಿದ್ದವಿರುವುದಾಗಿ ನಟ ದಿಲೀಪ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹೇಳಿಕೊಂಡಿದ್ದಾರೆ.

ಪ್ರಕರಣದಲ್ಲಿ ತಮ್ಮ ಹೆಸರನ್ನು ಅನಾವಶ್ಯಕವಾಗಿ ಎಳೆದು ತರಲಾಗುತ್ತಿದೆ, ತಾನು ಮುಗ್ಧ ಎಂದು ಹೇಳಿಕೊಂಡಿರುವ ದಿಲೀಪ್ ಅದನ್ನು ಸಾಬೀತು ಪಡಿಸಲು ಸುಳ್ಳು ಪತ್ತೆ ಪರೀಕ್ಷೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ತಮಗೆ ಬೆಂಬಲ ಸೂಚಿಸಿದ ನಟರಾದ ಸಲೀಂ ಕುಮಾರ್ ಮತ್ತು ಅಜು ವಾರ್ಗೀಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಒಂದು ಹೆಸರಿನಲ್ಲಿ ಕಳೆದ ಕೆಲವು ದಿನಗಳಿಂದ ನನ್ನ ಮಾನಹಾನಿಗೆ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚು ನಡೆಸುತ್ತಿದ್ದಾರೆ. ಪ್ರಮುಖ ಚಾನೆಲ್ ಗಳಲ್ಲಿಯೂ ನನ್ನನ್ನು ಅವಹೇಳನಕಾರಿಯಾಗಿ ಚಿತ್ರಿಸಲು ಯತ್ನಿಸಲಾಗುತ್ತಿದೆ.

ನನ್ನನ್ನು ಪ್ರೀತಿಸುವ ಪ್ರೇಕ್ಷಕರಿಂದ ನನ್ನನ್ನು ದೂರ ಮಾಡುವುದು ಇವರ ಪ್ರಮುಖ ಉದ್ದೇಶವಾಗಿದೆ. ನನ್ನ ಮುಂದಿನ ಹೊಸ ಚಿತ್ರಗಳಾದ ರಾಮ್ ಲೀಲಾ ಮತ್ತು ಇತರ ಸಿನಿಮಾಗಳನ್ನು ವಿಫಲಗೊಳಿಸಲು ಪ್ರಯತ್ನಿಸಲಾಗುತ್ತಿದೆ. ನನ್ನ ರಕ್ತಕ್ಕಾಗಿ ಹಾತೊರೆಯುವವರೊಂದಿಗೆ, ಮಾಧ್ಯಮಗಳೊಂದಿಗೆ, ಸಾರ್ವಜನಿಕರೊಂದಿಗೆ, ನಾನು ಯಾವ ಕೇಸಿನಲ್ಲಿಯೂ ಶಾಮೀಲಾಗಿಲ್ಲ ಎಂದು ಹೇಳಲು ಇಚ್ಛಿಸುತ್ತೇನೆ.ಬ್ರೈನ್ ಮ್ಯಾಪಿಂಗ್ , ಸುಳ್ಳು ಪತ್ತೆ ಪರೀಕ್ಷೆ ಯಾವುದೇ ಇರಲಿ, ಎಲ್ಲದಕ್ಕೂ ನಾನು ಸಿದ್ಧವಿದ್ದೇನೆ ಎಂದು ಹೇಳಿದ್ದಾರೆ.

See also  ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್(69) ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು