News Kannada
Friday, October 07 2022

ಮನರಂಜನೆ

ಅಮಿತಾಬ್ ಸಲಹೆ ಮೇಲೆ ರಜನಿ ರಾಜಕೀಯ ಭವಿಷ್ಯ ನಿರ್ಧಾರ - 1 min read

Photo Credit :

ಅಮಿತಾಬ್ ಸಲಹೆ ಮೇಲೆ ರಜನಿ ರಾಜಕೀಯ ಭವಿಷ್ಯ ನಿರ್ಧಾರ

ರಾಜಕೀಯ ಪ್ರವೇಶಿಸುವ ನಿಟ್ಟಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಹಾಗೂ ಚಿತ್ರರಂಗದಲ್ಲಿನ ತಮ್ಮ ಆಪ್ತರನ್ನು ಭೇಟಿಯಾಗಿ ಸಲಹೆ ಸೂಚನೆ ಪಡೆಯುತ್ತಿದ್ದಾರೆ.

ಅಂತೆಯೇ ತಮ್ಮ ಆತ್ಮೀಯ ಗೆಳೆಯ ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾಗಿ ರಜನಿ ರಾಜಕೀಯ ಪ್ರವೇಶದ ಕುರಿತು ಅವರ ಸಲಹೆ ಕೇಳಲಿದ್ದಾರೆ ಎನ್ನಲಾಗಿದೆ.

ಕಳೆದ ತಿಂಗಳು ಅಭಿಮಾನಿಗಳೊಂದಿಗೆ ಸುದೀರ್ಘ ಸಮಾವೇಶ ನಡೆಸಿದ ರಜನಿ ತಾವು ರಾಜಕೀಯ ಸೇರಬೇಕೆಂಬುದು ದೇವರ ಇಚ್ಛೆಯಾದರೆ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿ, ರಾಜಕೀಯ ಪ್ರವೇಶಿಸುವ ಸುಳಿವು ನೀಡಿರೋದು ಗೊತ್ತಿರೋ ವಿಚಾರವೇ.

ಆದರೆ ರಜನಿ ಕುಟುಂಬದಲ್ಲಿ ಅವರ ರಾಜಕೀಯ ಪ್ರವೇಶಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿವೆ. ಅಮಿತಾಬ್ ಬಚ್ಚನ್ ಮತ್ತಿತರ ಸ್ಟಾರ್ಗಳು ರಾಜಕೀಯ ಪ್ರವೇಶಿಸಿ ಭ್ರಮನಿರಸನಗೊಂಡು ಹಿಂತಿರುಗಿದ ನಿದರ್ಶನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಜನಿ ಕುಟುಂಬದ ಕೆಲ ಸದಸ್ಯರು ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ರಜನಿ ಕುಟುಂಬದ ಆಪ್ತರೊಬ್ಬರ ಪ್ರಕಾರ, ರಜನಿ ಅವರಿವರಿಂದ ಉತ್ತೇಜನಗೊಂಡು ರಾಜಕೀಯ ಪ್ರವೇಶಿಸುವ ಮಾತನಾಡಿರಬಹುದು. ಅದರೆ ಅವರಿಗೆ ನಿಜವಾಗಿಯೂ ಆ ಇರಾದೆ ಇಲ್ಲ. ಅವರ ಫ್ಯಾಮಿಲಿಯಂತೂ ರಾಜಕೀಯ ಬೇಡವೇ ಬೇಡ ಎನ್ನುತ್ತಿದೆ ಎಂದಿದ್ದಾರೆ.

See also  ನಟಿ ಜತೆ ನಿಶ್ಚಿತಾರ್ಥ ಮಾಡಿಕೊಂಡ ಬಿಗ್ ಬಾಸ್ ಖ್ಯಾತಿಯ ಕ್ರಿಕೆಟಿಗ ಅಯ್ಯಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು