News Kannada
Saturday, October 01 2022

ಮನರಂಜನೆ

ರಾಜ್ಯವನ್ನು ಬೆಚ್ಚಿ ಬೀಳಿಸಿದ ಘಟನೆ ಆಧರಿಸಿದ ‘ರಘುವೀರ’ - 1 min read

Photo Credit :

ರಾಜ್ಯವನ್ನು ಬೆಚ್ಚಿ ಬೀಳಿಸಿದ ಘಟನೆ ಆಧರಿಸಿದ 'ರಘುವೀರ'

ಹರ್ಷ ಮತ್ತು ಧೇನು ಅಚ್ಚಪ್ಪ ಅಭಿನಯದ ‘ರಘುವೀರ’ಚಿತ್ರದ ಹಾಡುಗಳ ಬಿಡುಗಡೆ ಬುಧವಾರ ರಾತ್ರಿ ನಡೆದಿದೆ.

ಕರ್ನಾಟಕವನ್ನೇ ಬೆಚ್ಚಿಬೀಳಿಸಿದ ಸತ್ಯ ಘಟನೆ ಆಧಾರಿತ ಚಿತ್ರ ಎಂಬ ಬರಹ ಈ ಚಿತ್ರದಲ್ಲಿದೆ. ಆದರೆ, ಕರ್ನಾಟಕವನ್ನು ಬೆಚ್ಚಿಬೀಳಿಸಿದ ಆ ಘಟನೆ ಯಾವುದು ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.

ಕೆಲ ವರ್ಷಗಳ ಹಿಂದೆ ಜಿಮ್ ರಘು ಎಂಬ ಹುಡುಗ ಒಬ್ಬಳು ಹುಡುಗಿಯನ್ನು ಇಷ್ಟಪಟ್ಟಿದ್ದ. ಅದನ್ನು ಸಹಿಸದ ಆಕೆಯ ಮನೆಯವರು ಅವನ ಕಣ್ಣನ್ನು ಕಿತ್ತು ಹಾಕಿದ್ದರು. ರಘು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲೇ ‘ದುನಿಯಾ’ ವಿಜಯ್, ಪ್ರೇಮ್, ಎಸ್. ನಾರಾಯಣ್ ಮುಂತಾದವರು ರಘು ಅವರನ್ನು ಭೇಟಿ ಮಾಡಿದ್ದರು. ಆ ಘಟನೆ ಆಧರಿಸಿ ಈಗ ಚಿತ್ರ ನಿರ್ಮಾಣಮಾಡಲಾಗಿದೆ.

ಈ ಹಿಂದೆ ಎಸ್. ನಾರಾಯಣ್ ರಘು ಕಥೆ ಆಧರಿಸಿ ಚಿತ್ರ ಮಾಡುವುದಾಗಿಯೂ ಹೇಳಿಕೊಂಡಿದ್ದರು. ಆದರೆ, ಈಗ ಈ ಚಿತ್ರವನ್ನು ಸೂರ್ಯ ಸತೀಶ್ ನಿರ್ಮಿಸಿದ್ದಾರೆ.

‘ರಘುವೀರ’ ಚಿತ್ರದ ನಾಯಕ ಹರ್ಷಗೆ ರಘು ಹಳೆಯ ಸ್ನೇಹಿತ. ಇಬ್ಬರೂ ಕೆಲವು ವರ್ಷಗಳ ಹಿಂದೆ ‘ಬಣ್ಣ ಬಣ್ಣದ ಲೋಕ’ ಎಂಬ ಚಿತ್ರವನ್ನು ಒಟ್ಟಿಗೆ ಮಾಡಿದ್ದಾರೆ. ಆದರೆ, ಚಿತ್ರ ಬಿಡುಗಡೆಯಾಗುವಷ್ಟರಲ್ಲಿ, ರಘುಗೆ ಬಣ್ಣ ನೋಡುವುದಕ್ಕೇ ಸಾಧ್ಯವಾಗಲಿಲ್ಲ ಎನ್ನುತ್ತಾರೆ ಹರ್ಷ.

ಚಿತ್ರದಲ್ಲಿ ಅವರು ರಘುವಿನ ಪಾತ್ರ ಮಾಡಿದ್ದು, ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಸಾಹಿತ್ಯ, ಸಂಭಾಷಣೆ ಮತ್ತು ಚಿತ್ರಕಥೆಯನ್ನು ರಚಿಸಿದ್ದಾರೆ ಸೂರ್ಯಸತೀಶ್.

See also  ಜನಮೆಚ್ಚುಗೆ ಗಳಿಸಿದ 'ಶುದ್ಧಿ' ಟ್ರೇಲರ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು