ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದುನಿಯಾ ವಿಜಯ್ ಇಬ್ಬರೂ ಚಿತ್ರರಂಗಕ್ಕೆ ಬಂದು 10 ವರ್ಷ ಕಳೆದಿವೆ. ಇವರಿಬ್ಬರು ಒಂದೇ ಚಿತ್ರದಲ್ಲಿ ಒಟ್ಟಿಗೆ ನಟಿಸಿಲ್ಲ. ಇದೀಗ ಇವರಿಬ್ಬರೂ ಜೊತೆಯಾಗಿ ಒಂದೇ ಚಿತ್ರದಲ್ಲಿ ಜೊತೆಯಾಗಿ ನಟಿಸಲು ಸಿದ್ದತೆ ನಡೆಸಲಾಗುತ್ತಿದೆಯಂತೆ, ಹೀಗಂತ ಖುದ್ದು ಗಣೇಶ್ ಮನದಾಸೆ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಯೋಗರಾಜ್ ಭಟ್ ಬರೆದ ಜಿಎಸ್ ಟಿ ಹಾಡಿಗೆ ಧ್ವನಿ ನೀಡಿದ್ದ ಈ ಇಬ್ಬರು ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಬಗ್ಗೆಯೂ ತಿಳಿಸಿದ್ದಾರೆ. ನಾವಿಬ್ಬರೂ ನಾಯಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು 10 ವರ್ಷ ಕಳೆದಿವೆ. ಈವರೆಗೂ ಒಟ್ಟಿಗೆ ನಟಿಸುವ ಅವಕಾಶ ಒದಗಿ ಬಂದಿರಲಿಲ್ಲ. ಇದೀಗ ಹಾಡಿನಲ್ಲಿ ಇಬ್ಬೂ ಜೊತೆಯಾಗಿದ್ದೇವೆ ಎಂದು ಹೇಳಿದ್ದಾರೆ.
ಸಿನಿಮಾವೊಂದರಲ್ಲಿ ನಾವಿಬ್ಬರೂ ನಟಿಸಲಿದ್ದೇವೆ. ಶೀಘ್ರವೇ ಮುಂದಿನ ದಿನಗಳಲ್ಲಿ ಈ ಕುರಿತು ಇನ್ನಷ್ಟು ಮಾಹಿತಿ ನೀಡಲಿದ್ದೇವೆ ಎನ್ನುತ್ತಾರೆ ಗಣೇಶ್.