ಮಂಗಳೂರು: ತಲೆಯಲ್ಲಿ ಕೂದಲಿಲ್ಲದ 28 ಹರೆಯದ ಮಂಗಳೂರಿನ ಪ್ರಾಧ್ಯಾಪಕ ಹುಡುಗಿಯನ್ನು ಹುಡುಕುವ ಸಂದರ್ಭದಲ್ಲಿ ಯಾವ ತೊಂದರೆ ಹಾಗೂ ಕಷ್ಟಗಳನ್ನು ಅನುಭವಿಸುತ್ತಾನೆ ಎಂಬ ಕಥಾ ವಸ್ತುವೇ ಒಂದು ಮೊಟ್ಟೆಯ ಕಥೆ. ಈ ಚಿತ್ರವು ಇದೇ ಜುಲೈ 7 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ರಾಜ್.ಬಿ ಶೆಟ್ಟಿ ತಿಳಿಸಿದ್ದಾರೆ.
ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ತಲೆಯಲ್ಲಿ ಕೂದಲಿಲ್ಲದ 28 ಹರೆಯದ ಮಂಗಳೂರಿನ ಸಾಮಾನ್ಯ ಕನ್ನಡ ಪ್ರಾಧ್ಯಾಪಕ ತನ್ನ ಕಣ್ಣಿಗೆ ಇಷ್ಟವಾಗುವ ಹುಡುಗಿಯನ್ನು ಹೇಗೆ ಹುಡುಕುತ್ತಾನೆ, ಮಧು ಅನ್ವೇಷಣೆಯಲ್ಲಿರುವ ಜನಾರ್ಧನನಿಗೆ ಎದುರಾಗುವ ಸಮಸ್ಯೆಗಳು, ಜೀವನದ ಹೋರಾಟದಲ್ಲಿ ಉಂಟಾಗುವ ಅವಮಾನಗಳು, ಆತನಲ್ಲಾಗುವ ಮನಪಕ್ವತೆಯೇ ಒಂದು ಮೊಟ್ಟೆಯ ಕಥೆ ಎಂದು ಅವರು ತಿಳಿಸಿದ್ದಾರೆ.
ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಹಾಗೂ ತುಳು ರಂಗ್ ಚಿತ್ರ ನಿರ್ದೇಶಕ ಸುಹಾನ್ ಪ್ರಸಾದ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರವೀಣ್ ಶ್ರೀಯಾನ್ ರ ಛಾಯಾಗ್ರಹಣ ಹಾಗೂ ಸಂಕಲನವಿದ್ದು, ಮಿಧುನ್ ಮುಕುಂದನ್ ಅವರ ಸಂಗೀತ ನಿರ್ದೇಶನವಿದೆ. ಚಿತ್ರದ ತಾರಾಂಗಣದಲ್ಲಿ ನಾಯಕನಾಗಿ ರಾಜ್.ಬಿ.ಶೆಟ್ಟಿ, ನಾಯಕಿಯಾಗಿ ಅಮೃತಾ ನಾಯ್ಕ್ ಸೇರಿದಂತೆ ಶೈಲಶ್ರಿ ಮುಲ್ಕಿ, ಶ್ರೇಯಾ ಅಂಚನ್, ಉಷಾ ಭಂಡಾರಿ, ಪ್ರಕಾಶ್ ತೂಮಿನಾಡು, ಮೈಮ್ ರಾಮ್ ದಾಸ್, ದೀಪಕ್ ರೈ ಪಾಣಾಜೆ ಪ್ರಮುಖವಾಗಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿ.ಬಿ.ಸಿ ಹಾಗೂ ರೇಡಿಯೋಗಳಲ್ಲಿ ಚಿತ್ರದ ಹಾಡುಗಳು ಈಗಾಗಲೇ ಜನರ ಮೆಚ್ಚುಗೆಯನ್ನು ಪಡೆದುಕೊಂದಿದೆ. ಈ ಚಿತ್ರವು ದೇಶದಾದ್ಯಂತ ಆಗಸ್ಟ್ 1 ರಂದು ತೆರೆ ಕಾಣಲಿದೆ ಎಂದು ತಿಳಿಸಿದ್ದಾರೆ.