ವೀರಾಜಪೇಟೆ: ಕಿರಿಕ್ ಪಾರ್ಟಿಯ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡುವುದರ ಮೂಲಕ ಅದೇ ಸಿನಿಮಾದ ಹೀರೋ ಉಡುಪಿ ಮೂಲದ ರಕ್ಷಿತ್ ಶೆಟ್ಟಿಯನ್ನು ವಿವಾಹವಾಗುತ್ತಿರುವ ಕೊಡಗಿನ ಚೆಲುವೆ ರಕ್ಷಿತಾ ಮಂದಣ್ಣ ಅವರ ನಿಶ್ಚಿತಾರ್ಥಕ್ಕೆ ವೀರಾಜಪೇಟೆಯ ಸೆರಿನಿಟಿ ಹಾಲ್ ಸಜ್ಜಾಗಿದೆ.
ಈಗಾಗಲೇ ಸೆರಿನಿಟಿ ಹಾಲ್ ನಲ್ಲಿ ರಶ್ಮಿಕಾ ಮಂದಣ್ಣ ಅವರ ಕುಟುಂಬಸ್ಥರು ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳನ್ನು ಸ್ವಾಗತಿಸಲು ಕಾಯುತ್ತಿದ್ದಾರೆ. ಸಂಜೆ 6.30ಕ್ಕೆ ನಿಶ್ವಿತಾರ್ಥ ಕಾರ್ಯಕ್ರಮ ನೆರವೇರಲಿದ್ದು, ಇದೇ ವೇಳೆ ರಿಂಗ್ ಬದಲಾವಣೆ ನಡೆಯಲಿದೆ.
ಕೊಡವ ಸಂಪ್ರದಾಯದಂತೆ ನಿಶ್ವಿತಾರ್ಥ ನಡೆಯುವ ಸಾಧ್ಯತೆಯಿದೆ. ಇದಕ್ಕೆ ಈಗಾಗಲೇ ಕುಟುಂಬದ ಸದಸ್ಯರು ಮತ್ತು ಕೆಲವೇ ಕೆಲವು ಪ್ರಮುಖ ಗಣ್ಯರು, ರಶ್ಮಿಕಾ ಮಂದಣ್ಣ ಅವರ ಗೆಳತಿಯರನ್ನು ಆಹ್ವಾನಿಸಲಾಗಿದ್ದರೆ, ರಕ್ಷಿತ್ ಶೆಟ್ಟಿ ಕಡೆಯಿಂದಲೂ ಕುಟುಂಬಸ್ಥರು ಮತ್ತು ಗೆಳೆಯರು ಹಾಗೂ ಚಿತ್ರರಂಗದ ಹಲವು ನಟನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ದುಬೈನಲ್ಲಿ ನಡೆದ ಸೈಮಾ ಆವಾರ್ಡ್ ಕಾರ್ಯಕ್ರಮಕ್ಕೆ ತೆರಳಿರುವ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಹಾಗೂ ಹಲವು ನಟನಟಿಯರು ದುಬೈನಿಂದ ನೇರವಾಗಿ ಮಂಗಳೂರಿಗೆ ಆಗಮಿಸಲಿದ್ದು ಅಲ್ಲಿಂದ ನೇರವಾಗಿ ವೀರಾಜಪೇಟೆಗೆ ಆಗಮಿಸಿ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಆಗಮಿಸುವ ಅತಿಥಿಗಳಿಗೆ ವೆಜ್ ಹಾಗೂ ನಾನ್ ವೆಜ್ ಬೋಜನ ವ್ಯವಸ್ಥೆ ಮಾಡಲಾಗುತ್ತಿದ್ದು, ನಾನ್ ವೆಜ್ ಮೆನು ವೈಟ್ ರೈಸ್, ಗೀರೈಸ್, ಮಟನ್ಗಸಿ, ಚಿಕನ್ ಸುಕ್ಕಾ, ಬ್ರಿಂಜಲ್ ಪ್ರೈ, ಉಪ್ಪಿನ ಕಾಯಿ, ಮೊಸರು, ಫೋರ್ಕ್ ಪ್ರೈ ಸೇರಿದಂತೆ ಹಲವು ಬಗೆಯ ಖಾದ್ಯಗಳು ಸೇರಿದಂತೆ ಕೊಡಗಿನ ಸಾಂಪ್ರದಾಯಿಕ ಖಾದ್ಯಗಳು ಇರಲಿವೆ ಎನ್ನಲಾಗಿದೆ.