ಕಿರಿಕ್ ಪಾರ್ಟಿ ಜೋಡಿ ರಕ್ಷಿತ್ ಶೆಟ್ಟಿ – ರಶ್ಮಿಕಾ ಮಂದಣ್ಣಾ ಜೋಡಿ ಇದೀಗ ಮದುವೆಯ ತಯಾರಿಯಲ್ಲಿದೆ. ನಿಶ್ಚಿತಾರ್ಹ ಸಡಗರದಲ್ಲಿರುವ ಈ ತಾರೆಯರಿಗೆ ಅಭಿನಂದನೆಗಳಷ್ಟೇ ಅಲ್ಲ, ಪ್ರಶಸ್ತಿಗಳ ಮಹಾಪೂರವೇ ಹರಿದುಬರುತ್ತಿವೆ. ಅದರಲ್ಲೂ ಈ ನಟ-ನಾಟಿಗೆ ಸೈಮಾ ಪ್ರಶಸ್ತಿಯೂ ಸಿಕ್ಕಿರುವುದು ಮತ್ತೊಂದು ವಿಶೇಷ.
ಸ್ಯಾಂಡಲ್ ವುಡ್ ನ ಪಾಲಿಗೆ ಇತಿಹಾಸ ಎನಿಸಿರುವ ‘ಕಿರಿಕ್ ಪಾರ್ಟಿ’ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿದೆ. 150 ದಿನ ಪೂರೈಸುವ ಮೂಲಕ ಇತ್ತೀಚಿನ ವರ್ಷಗಳಲ್ಲೇ ದಾಖಲೆ ಎಂಬ ಖ್ಯಾತಿಗೂ ‘ಕಿರಿಕ್ ಪಾರ್ಟಿ’ ಪಾತ್ರವಾಗಿದೆ.
ಇದೀಗ ಇದೇ ‘ಕಿರಿಕ್ ಪಾರ್ಟಿ’ ಪ್ರತಿಷ್ಠಿತ ಸೌತ್ ಫಿಲ್ಮ್ ಫೇರ್ ನಲ್ಲಿ (ಸೈಮಾ) ಅವಾರ್ಡ್ ಪೈಕಿ ಬರೋಬ್ಬರಿ 6 ಪ್ರಶಸ್ತಿಗಳನ್ನು ಪಡೆದು ಗಮನ ಸೆಳೆದಿದೆ. ಅತ್ಯುತ್ತಮ ಸಿನಿಮಾ, ಬೆಸ್ಟ್ ಡೈರೆಕ್ಟರ್ ಅವಾರ್ಡ್ : ರಿಷಬ್ ಶೆಟ್ಟಿ,
ಉದಯೋನ್ಮುಖ ನಟಿ ಪ್ರಶಸ್ತಿ ರಶ್ಮಿಕಾ ಮಂದಣ್ಣ, ಪೋಷಕ ನಟ ಪ್ರಶಸ್ತಿ : ಚಂದನ್ ಆಚಾರ್, ಅತ್ಯುತ್ತಮ ಸಂಗೀತ ನಿರ್ದೇಶಕ : ಬಿ ಅಜನೀಶ್ ಲೋಕನಾಥ್ , ಹಾಗೂ ಅತ್ಯುತ್ತಮ ಗೀತೆ ರಚನಾಕಾರ ಪ್ರಶಸ್ತಿ : ಧನಂಜಯ್ ರಂಜನ್ ‘ಬೆಳಗೆದ್ದು ಯಾರ ಮುಖ’ ಎಂಬ ಹಾಡಿಗೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.