ಕನ್ನಡದ ಪಾಪ್ ಗಾಯಕ ಚಂದನ್ ಶೆಟ್ಟಿ ವಿಚಿತ್ರ ಪ್ರೇಮಕಥೆ ಚಿತ್ರದ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಆ ಮೂಲಕ ಚಂದನ್ ಹೀರೋ ಆಗಲಿದ್ದಾರೆ. ಈ ಮುನ್ನ ಪಾಪ್ ಗಾಯಕರಾಗಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರು. ಅವರ ಥ್ರೀ ಪೆಗ್ ಆಲ್ಬಂ ಸಖತ್ ಹಿಟ್ ಆಗಿತ್ತು.
ವಿಚಿತ್ರ ಪ್ರೇಮಕಥೆ ಸಿನಿಮಾ ‘ಕುಂಚ ಕಹಾನಿ’ ಎಂಬ ಟ್ಯಾಗ್ ಲೈನ್ ಸಹ ಹೊಂದಿದೆ. ಇದು ಒಂದು ಲವ್ ಸ್ಟೋರಿ ಸಿನಿಮಾ ಎನ್ನಬಹುದು. ಚಿತ್ರ ಕಲಾವಿದರ ಕುರಿತಾದ ಕಥೆಯನ್ನು ಚಿತ್ರದಲ್ಲಿ ಕಾಣಬಹುದು. ವಿಶೇಷ ಅಂದರೆ ವಿ ಅಕ್ಷರವನ್ನು ತೆಗೆದು ಹಾಕಿದರೆ ಶೇಷ ಪ್ರೇಮಕಥೆ ಎಂದು ಆಗುವುದು. ಈಗಾಗಲೇ ಗುಬ್ಬಿಯಲ್ಲಿ ಚಿತ್ರದ ಮುಹೂರ್ತವನ್ನು ನೆರವೇರಿಸಲಾಗಿದೆ.
ಚಿತ್ರದ ಚಿತ್ರೀಕರಣವನ್ನು ಗುಬ್ಬಿ, ತುಮಕೂರು, ಬೆಂಗಳೂರು, ಮೂಡಿಗೆರೆ ಮುಂತಾದ ನಿಸರ್ಗದ ಸಿರಿಯಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿದೆ. ಒಟ್ಟಿನಲ್ಲಿ ಪಾಪ್ ಗಾಯಕ ಹೀರೋ ಆಗುತ್ತಿದ್ದಾರೆ ಎಂಬುದು ಖುಷಿಯ ವಿಚಾರ.
ಚಿತ್ರದಲ್ಲಿ ಚಂದನ್ ಗೆ ಜೋಡಿಯಾಗಿ ನಿಶ್ಚಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ. ರವಿವರ್ಮ ನಿರ್ದೇಶನ, ಆರ್.ಪಿ.ಪಟ್ನಾಯಕ್ ಸಂಗೀತ, ಭರತ್ಕುಮಾರ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರ ಗುಬ್ಬಿ ವೀರಣ್ಣ ಪ್ರೊಡಕ್ಷನ್ಸ್ ಅಡಿಯಲ್ಲಿ ಸಿದ್ಧವಾಗುತ್ತಿರುವುದು ಮತ್ತೊಂದು ವಿಶೇಷ .