ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಭಿನಯದ “ಹೊಸ ಅನುಭವ” ಚಿತ್ರ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಜುಲೈ 14 ರಂದು ಬಿಡುಗಡೆಯಾಗಲಿದೆ. ಹಿಂದೆ ತೆರೆಕಂಡಿದ್ದ ಕಾಶಿನಾಥ್ ಅವರ ಅನುಭವ ಚಿತ್ರಕ್ಕಿಂತ ತುಸು ವಿಭಿನ್ನ ರೀತಿಯಲ್ಲಿ ಚಿತ್ರ ಮೂಡಿಬಂದಿದೆ.
ಹಳೆಯ ಅನುಭವ ಸಿನಿಮಾಗಿಂತ ಹೊಸ ಅನುಭವ ಸಿನಿಮಾ ತುಂಬಾ ವಿಶಿಷ್ಟತೆಯನ್ನು ಹೊಂದಿದೆ. ಅಲ್ಲದೆ ಕಥೆಯಲ್ಲಿ ಸಹ ವಿಭಿನ್ನತೆಯನ್ನು ಕಾಣಬಹುದು. ಹೊಸ ಅನುಭವ ಸಿನಿಮಾ ಜನರಿಗೆ ಉತ್ತಮ ಸಂದೇಶವನ್ನು ಕೊಡುವುದು. ಹಾಗೆ ಅವರಲ್ಲಿ ಹೊಸ ಬದಲಾವಣೆ ಮೂಡಿಸುವಲ್ಲಿ ಕಥೆ ಸಹಾಯಕವಾಗುತ್ತದೆ.
ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಎಸ್. ನಾರಾಯಣ್, ದಯಾಳ್ ಪದ್ಮನಾಭ್, ಕೆಂಪೇಗೌಡ, ಮಲ್ಲೇಶಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ಕಥೆ ಮತ್ತು ಸಾಹಿತ್ಯವನ್ನು ಬಿ.ಆರ್. ರವಣಪ್ಪ ಬರೆದಿದ್ದಾರೆ. ಹಾಗೆಯೇ ಚಿತ್ರಕಥೆ ಜೊತೆಗೆ ನಿರ್ದೇಶನವನ್ನು ಎಸ್.ಉಮೇಶ ಮಾಡಿದ್ದಾರೆ. ಜಿ.ವಿ.ರಮೇಶ ಛಾಯಾಗ್ರಹಣ ಮತ್ತು ಎ.ಟಿ.ರವೀಶ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.