News Kannada
Thursday, December 01 2022

ಮನರಂಜನೆ

ಸ್ಯಾಂಡಲ್ ವುಡ್ ಅಂಗಳದಲ್ಲಿ ನಿದ್ದೆ ಕೆಡಿಸಲು ಬರ್ತಾ ಇದ್ದಾರೆ ಮತ್ತೋರ್ವ ಸಾನ್ವಿ.. - 1 min read

Photo Credit :

ಸ್ಯಾಂಡಲ್ ವುಡ್ ಅಂಗಳದಲ್ಲಿ ನಿದ್ದೆ ಕೆಡಿಸಲು ಬರ್ತಾ ಇದ್ದಾರೆ ಮತ್ತೋರ್ವ ಸಾನ್ವಿ..

ಇತ್ತೀಚೆಗೆ ಗಾಂಧಿನಗರಕ್ಕೆ ಹಲವಾರು ನವ ಪ್ರತಿಭೆಗಳು ಎಂಟ್ರಿಯಾಗುತ್ತಿದ್ದಾರೆ. ಅದರಲ್ಲಿ ಕೆಲವರಿಗೆ ಅದೃಷ್ಟ ಸಿಕ್ಕಿ ಮತ್ತೆ-ಮತ್ತೆ ಅವಕಾಶಗಳು ದೊರೆತರೆ, ಇನ್ನು ಕೆಲವರಿಗೆ ಅದೃಷ್ಟ ಕೈ ಕೊಟ್ಟು ಒಂದೇ ಸಿನಿಮಾ ಮಾಡಿ ಬಂದ ಹಾಗೆ ಮಾಯವಾಗುತ್ತಾರೆ.

ಈಗಾಗಲೇ ಹಲವಾರು ನವ ನಟ-ನಟಿಯರು ಸ್ಯಾಂಡಲ್ ವುಡ್ ಗೆ ಕಾಲಿಟ್ಟು, ಹೊಸಬರ ಸಿನಿಮಾಗಳಲ್ಲಿ ಮಿಂಚಿ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ಇದೀಗ ಇವರೆಲ್ಲರ ಸಾಲಿಗೆ ಹೊಸ ಸೇರ್ಪಡೆಯಾಗುತ್ತಿದ್ದಾರೆ ಸುರಸುಂದರಾಂಗಿ ಚೆಲುವೆ. ಆ ಚೆಲುವೆ ಯಾರಂತ ಕುತೂಹಲವೇ?….

ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡಿದ ಕಿರಿಕ್ ಪಾರ್ಟಿ ಸಿನಿಮಾದ ನಂತರ ಸಾನ್ವಿ ಎನ್ನುವ ಹೆಸರು ಎಲ್ಲಾ ಪಡ್ಡೆ ಹುಡುಗರ ಹಾರ್ಟನ್ನು ಕೆದಕಿದೆ. ಕನ್ನಡ  ಸಿನಿ ಪ್ರೀಯರು ಮೊದಲ ನೋಟದಲ್ಲೇ ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಷ್ಟರ ಮಟ್ಡಿಗೆ ಕಿರಿಕ್ ಪಾರ್ಟಿಯ  ಸಾನ್ವಿ ಪಾತ್ರ ಹಾಗು ರಶ್ಮಿಕಾ ಮಂದಣ್ಣ ವೀಕ್ಷಕರ  ಗಮನ ಸೆಳೆದಿದ್ದಾರೆ. ಯಾಕಪ್ಪ ಈ ಸಾನ್ವಿಯ ನೆನಪು ಅಂತೀರಾ, ಹೌದು ಇತ್ತೀಚೆಗೆ ಭಾರೀ  ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ‘ಅಹಲ್ಯಾ ಸುರೇಶ್’, ಈ ಬೆಡಗಿಯು ಸಾನ್ವಿಯ ಹೋಲಿಕೆಯನ್ನು ಹೊಂದಿದ್ದಾರೆ ಅಂದರೆ ತಪ್ಪಾಗಲಾರದು.
ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿರುವ ಹೊಸ ಸಾನ್ವಿ ಅಹಲ್ಯಾ ಸುರೇಶ್  ‘ನ್ಯೂಸ್  ಕನ್ನಡದ’ (www.newskannada) ಜತೆ ಮಾತಿಗೆ ಸಿಕ್ಕಾಗ.
1.ನಿಮ್ಮ ಸಿನಿಮಾದ ಎಂಟ್ರೀ ಹೇಗಿತ್ತು..?
ಮೂಲತಃ ಚಿಕ್ಕಬಳ್ಳಾಪುರದವಳಾಗಿರುವ ನಾನು ಇಲ್ಲಿನ ವಿಕ್ರಮ್ ಕಾಲೇಜಿನಲ್ಲಿ ಬಿಬಿಎಂ ಮುಗಿಸಿ, ಉನ್ನತ್ತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಆಗಮಿಸಿದ ನನಗೆ ಅಲ್ಲಿಯ ಪರಿಸರ ನನ್ನನ್ನು ಸಿನಿಮಾರಂಗಕ್ಕೆ ಸೆಳೆಯಿತು. ನನ್ನ ತಾಯಿಗೆ ನಾನು ಸಿನಿಮಾ ನಟಿಯಾಗಬೇಕೆಂಬ ಬಯಕೆ ಇತ್ತು. ಕೆಲವು ಸಣ್ಣ ಪುಟ್ಟ ಆಡಿಶನ್ ಗಳಲ್ಲಿ ಪಾಲ್ಗೊಳ್ಳುತ್ತಿರುವಾಗ ಕಮರೊಟ್ಟು ಚೆಕ್ ಪೋಸ್ಟ್ ಎಂಬ ಹಾರರ್ ಸಿನಿಮಾದಲ್ಲಿ ನಟನೆಗೆ ಅವಕಾಶ ಸಿಕ್ಕಿದ್ದು, ಈಗಾಗಲೇ ಶೂಟಿಂಗ್ ಅಂತಿಮ ಹಂತಕ್ಕೆ ತಲುಪಿದ್ದು, ಮುಂದಿನ ದಿನದಲ್ಲಿ ತೆರೆಗೆ ಬರಲು ಸಿದ್ದವಾಗಿದೆ. ಈಗಾಗಲೇ  ತೆಲುಗು ಸಿನಿಮಾ ‘ಮಾಂಗಲ್ಯಂ ತಂತುನಾನೇನಂ’ ನಲ್ಲಿ ನಟಿಸುತ್ತಿದ್ದೇನೆ. ಅಲ್ಲದೇ ತಮಿಳು ಚಿತ್ರದಲ್ಲೂ ಅವಕಾಶ ದೊರೆತಿದೆ. ಸ್ಯಾಂಡಲ್ ವುಡ್ ಸಿನಿಮಾ ಆದಿಪುರಾಣ ಚಿತ್ರದಲ್ಲೂ ನಟಿಸುತ್ತಿದ್ದೇನೆ.
2. ಆದಿಪುರಾಣ ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಏನ್ ಹೇಳ್ತೀರಾ?
ಆದಿಪುರಾಣ  ಚಿತ್ರದ  ನಿರ್ಮಾಪಕ ಶಮಂತ್ ಕೆ ರಾವ್ ಅವರ ಮೂರನೇ ಚಿತ್ರಕ್ಕೆ ಆಯ್ಕೆಯಾಗಿದ್ದು ತುಂಬಾ ಸಂತೋಷವಾಗುತ್ತಿದೆ. ಶಮಂತ್ ನನ್ನನ್ನು ಈ ಚಿತ್ರಕ್ಕೆ ಆಯ್ಕೆಮಾಡಿ, ನಟನೆಗೆ ಸ್ಪೂರ್ತಿದಾಯಕರಾಗಿದ್ದಾರೆ. ಆದಿಪುರಾಣವು ಒಂದು ಉತ್ತಮ ಹಾಸ್ಯಮಯ ಹಾಗೂ ರೊಮ್ಯಾಂಟಿಕ್ ಚಿತ್ರವಾಗಿದ್ದು, ಈ ಚಿತ್ರದಲ್ಲಿ ನಾನು ಸುಸಂಸ್ಕೃತ ಒಂದು ಬ್ರಾಹ್ಮಣ ಕುಟುಂಬದ ಹೆಣ್ಣುಮಗಳಾಗಿ, ಭರತನಾಟ್ಯ ಶಿಕ್ಷಕಿಯಾಗಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.
3. ಕನ್ನಡ ಸಿನಿಮಾರಂಗದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕನ್ನಡ ಸಿನಿಮಾರಂಗದಲ್ಲಿ ಅಸಾಧಾರಣ ಪ್ರತಿಭಾವಂತರಿದ್ದಾರೆ. ಅವರ ಸಾಮರ್ಥ್ಯವೂ ಅಗಾಧವಾದದ್ದು. ಕನ್ನಡ ಸಿನಿಮಾರಂಗವು ನಾನು ಊಹಿಸಿದಕ್ಕಿಂತ ವಿಶಾಲವಾಗಿದೆ. ಕಠಿಣ ಪರಿಶ್ರಮ ಶ್ರದ್ದೆ, ವಿನಯತೆ  ಇದ್ದರೆ ಈ ರಂಗದಲ್ಲಿ ಮುಂದೆ ಬರಲು ಸಾಧ್ಯ. ಪ್ರತಿಭಾವಂತರಿಗೆ ಕನ್ನಡ ಸಿನಿಮಾರಂಗ ಒಂದು ಉತ್ತಮ ಅವಕಾಶ.
4. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬಗ್ಗೆ ಏನು ಹೇಳ್ತೀರಾ..?
ಕಿರಿಕ್ ಪಾರ್ಟಿಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಾನ್ವಿಯ ಹೋಲಿಕೆ ಸಮಾಜ ನನ್ನಲ್ಲಿ ಕಂಡಿರಬಹುದು. ಆದರೆ ಸಾನ್ವಿಯ ಹಾಗೆ ಕಾಣಬೇಕೆಂಬ ಆಕಾಂಕ್ಷೆಯಾಗಲಿ, ಪಬ್ಲಿಸಿಟಿಯಾಗಬೇಕೆಂದು ನಾನು ಮಾಡ್ತ ಇಲ್ಲ. ಆದರೆ ಫೇಸ್ ಬುಕ್ ಫೋಲೋವಾರ್ಸ್ ಗಳು,  ಕೆಲವು ಟ್ರೋಲ್ ಪೇಜ್ ಗಳು ಫೇಸ್  ಬುಕ್ ನಲ್ಲಿ ಪೋಸ್ಟ್ ಮಾಡುತ್ತಿವೆ. ಇದಕ್ಕೆ ತುಂಬಾನೆ  ಪೋಸಿಟಿವ್ ಹಾಗೂ ನೆಗೆಟಿವ್ ಕಮೆಂಟ್ ಗಳು ಬಂದಿವೆ. ನಾನು ಸಿನಿಮಾ ರಂಗದಲ್ಲಿ ಒಬ್ಬ ಉತ್ತಮ ನಟಿಯಾಗಿ, ಒಳ್ಳೆಯ ಹೆಸರು ಗಳಿಸುತ್ತೇನೆಂಬ ಭರವಸೆ ನನ್ನಲಿದೆ.
5. ಸಿನಿಮಾದಲ್ಲಿ ನಟಿಸಲು ಮೊದಲ ಆಫರ್ ಸಿಕ್ಕಾಗ ಹೇಗಾನ್ನಿಸ್ತು?
ತುಂಬಾನೆ ಖುಷಿಯಾಗಿದೆ.  500 ಆಡಿಷನ್ ನಲ್ಲಿ ನಾನೂ ಸೆಲೆಕ್ಟ್ ಆಗಿರೋದಲ್ಲದೆ ಶಮಂತ್ ರಾವ್ ಅವರ ಟೀಮ್ ನಲ್ಲಿ ಕೆಲಸ ಮಾಡ್ಲಿಕ್ಕೆ ಅವಕಾಶ ಸಿಕ್ಕಿರೋದು ತುಂಬಾನೆ ಖುಷಿಯಾಗಿದೆ.  ಈಗಾಗಲೇ ವರ್ಕ್ ಶಾಪ್ ಶುರುವಾಗಿದ್ದು, ಶೂಟಿಂಗ್ ನಡಿತಾ ಇದೆ.ಆದಷ್ಟು ಬೇಗನೇ ಜನರಿಗೆ ಉತ್ತಮ ಹಾಗೂ ಮನರಂಜನಾತ್ಮಕ ಸಿನಿಮಾ ಕೊಡುವ ಭರವಸೆ ನನಗಿದೆ.
 

See also  ಶ್ರಿಯಾ ಭೂಪಲ್ ಜೊತೆ ನಾಗಾರ್ಜುನ ಕಿರಿಯ ಪುತ್ರ ಅಖಿಲ್ ಅದ್ದೂರಿ ನಿಶ್ಚಿತಾರ್ಥ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು