News Kannada
Friday, December 09 2022

ಮನರಂಜನೆ

ಅವಮಾನ ಸಹಿಸಿಕೊಳ್ಳುವುದು ಕಲಾವಿದನ ದೊಡ್ಡ ಗುಣ: ನಟ ಮನೋಜ್ ಪುತ್ತೂರು

Photo Credit :

ಅವಮಾನ ಸಹಿಸಿಕೊಳ್ಳುವುದು ಕಲಾವಿದನ ದೊಡ್ಡ ಗುಣ: ನಟ ಮನೋಜ್ ಪುತ್ತೂರು

ಕಲಾರಸಿಕರ ಮನದಲ್ಲಿ ಛಾಪನ್ನು ಮೂಡಿಸುತ್ತಿರುವ ಕೋಸ್ಟಲ್ ವುಡ್ ಇಂದು ಹಲವಾರು ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದೆ. ಹಳ್ಳಿಯಿಂದ ನಗರದ ಕಡೆ ಬಂದು ಚಿತ್ರರಂಗದಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡವರು ಹಲವಾರು ಮಂದಿ. ಅದರಲ್ಲಿ ಪುತ್ತೂರಿನ ಮನೋಜ್ ಕೂಡಾ ಒಬ್ಬರು.

ಮೂಲತಃ ಮಂಗಳೂರಿನ ಪುತ್ತೂರಿನವರಾದ ಇವರು 2012 ರಲ್ಲಿ ಮೈಸೂರಿನ ರಂಗಾಯಣ ರಂಗಭೂಮಿಯನ್ನು ಸೇರಿ ಸಕಲ ವಿದ್ಯೆಯನ್ನು ಅರಗಿಸಿಕೊಂಡವರು. ಒಂದು ವರ್ಷಗಳ ಕಾಲ ಡಿಪ್ಲೊಮಾ ಇನ್ ಥಿಯೇಟರಿಕಲ್ ಎಜುಕೇಷನ್ ಕೋರ್ಸ್ ಮಾಡಿ ಹಲವಾರು ಆಡಿಷನ್ ಗಳಲ್ಲಿ ಪಾಲ್ಗೊಂಡು ಸತತ ಪ್ರಯತ್ನದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ಮನೋಜ್. ಮಂಗಳೂರಿನ ಸಂಕೇತ ಟೀಮ್ ಜೊತೆ ಸೇರಿ ಬೀದಿ ನಾಟಕಗಳನ್ನು ಮಾಡಿ ಜನರನ್ನು ಮನರಂಜಿಸುತ್ತಿದ್ದ ಇವರು ತೆರೆಯ ಮೇಲೆ ಬಂದಿದ್ದು ಕುಡ್ಲ ಕೆಫೆ ಎಂಬ ತುಳು ಚಿತ್ರದ ಮೂಲಕ.

2015 ರಲ್ಲಿ ಸಂಜೀವ ದಂಡಿಕೇರಿಯವರ ಬಯ್ಯಮಲ್ಲಿಗೆ ಚಿತ್ರದಲ್ಲಿ ನಟಿಸಿದ್ದರು. ಕಾರಣಾಂತರಗಳಿಂದ ಚಿತ್ರ ತೆರೆಕಾಣಲಿಲ್ಲ. ಬಳಿಕ ಕುಡ್ಲ ಕೆಫೆಯ ಮೂಲಕ ಮನೋಜ್ ಪರದೆ ಮೇಲೆ ಕಾಣಿಸಿಕೊಂಡರು. ನಂತರ ಪುದರ್ ಗೊಂಜಿ ಬುಡೆದಿ ಚಿತ್ರದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ ಇವರು ಡಬ್ಬಿಂಗ್ ನಲ್ಲೂ ಪರಿಣತಿಯನ್ನು ಹೊಂದಿದ್ದಾರೆ.

ಪವಿತ್ರ ಬೀಡಿದ ಪೊಣ್ಣು ಹಾಗೂ ಕುಡ್ಲ ಕೆಫೆ ಚಿತ್ರದಲ್ಲಿ ವಿಲನ್ ಪಾತ್ರಧಾರಿಯಾಗಿ ಕಾಣಿಸಿಕೊಂಡು ತನ್ನ ಅಮೋಘ ನಟನೆಯಿಂದಲೇ ಜನರ ಮನಸ್ಸನ್ನು ಗೆದ್ದರು. ನವೀಲ್ ಪಡೀಲ್ ರ ಸಹಾಯ ಹಾಗೂ ಮಾರ್ಗದರ್ಶನದಿಂದ ತುಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮನೋಜ್, ರಂಗಾಯಣ ನನ್ನ ನಟನೆಗೆ ತುಂಬಾ ಸಹಾಯಕವಾಗಿದೆ. ಯೋಗ, ಮೈಮ್, ಬೀದಿ ನಾಟಕ, ಮೇಕಪ್, ಸ್ಟೇಜ್ ಸೆಟ್ಟಿಂಗ್, ಹಾಗೂ ಸ್ಕ್ರಿಪ್ಟ್ ರೈಟಿಂಗ್ ನ್ನು ರಂಗಾಯಣ ತಿಳಿಸಿಕೊಟ್ಟಿದೆ. ನನ್ನ ಸಿನಿಮಾ ರಂಗಕ್ಕೆ ರಂಗಾಯಣದ ಕೊಡುಗೆ ಅಪಾರ ಎಂದು ರಂಗಾಯಣದ ಅನುಭವವನ್ನು ಹಂಚಿಕೊಂಡರು.

ಕಲಾವಿದರಿಗೆ ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ. ಆತನಿಗೆ ಎಷ್ಟೇ ಅವಮಾನವಾದರೂ ಅದನ್ನು ಸಹಿಸಿಕೊಂಡು ತಾಳ್ಮೆಯಿಂದ ತನಗೆ ನೀಡಿರುವ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡುವವನೇ ನಿಜವಾದ ಕಲಾವಿದ. ನನಗೆ ಹೀರೋ ಆಗಬೇಕೆಂಬ ಕನಸಿತ್ತು. ಅದರಂತೆಯೇ ರಂಗಾಯಣ ಸೇರಿಕೊಂಡೆ. ಅಲ್ಲಿಂದ ಹೊರಬಂದ ಮೇಲೆ ಕಲಾವಿದರ ಕಷ್ಟ ಏನೆಂಬುದು ಅರ್ಥವಾಯಿತು. ಅವಕಾಶಗಳು ತಾವಾಗಿಯೇ ಒದಗಿ ಬರುವುದಿಲ್ಲ. ಒದಗಿ ಬಂದ ಅವಕಾಶಗಳನ್ನು ಕೈ ಬಿಡಬಾರದು ಎಂದು ಹೇಳುತ್ತಾರೆ.

ಮೊದಲ ಬಾರಿ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿರುವ ಮನೋಜ್, ಸೃಜನ್ ಲೋಕೇಶ್ ಜೊತೆ ‘ಹ್ಯಾಪಿ ಜರ್ನಿ’ ಚಿತ್ರದಲ್ಲಿ ಸ್ನೇಹಿತನ ಪಾತ್ರದಲ್ಲಿ ನಟಿಸಿರುವುದು ತುಂಬಾ ಖುಷಿಯಿದೆ. ಮೊದಲ ಬಾರಿ ಅವರನ್ನು ಸೆಟ್ ನಲ್ಲಿ ನೋಡಿದ್ದು. ಒಂದು ದಿನ ನಾನು ಟೈ ಸರಿಯಾಗಿ ಕಟ್ಟಿಕೊಂಡಿರಲಿಲ್ಲ. ಆಗ ಯಾರೋ ಬಂದು ನನ್ನ ಟೈ ಸರಿ ಮಾಡಿದರು. ಯಾರೆಂದು ನೋಡಿದಾಗ ಅದು ಸೃಜನ್ ಲೋಕೇಶ್ ಆಗಿದ್ದರು. ನನಗೆ ಶಾಕ್ ಆಯ್ತು. ಬೇಡ ಅಂದ್ರೂ ಕೇಳದೆ, ಅವರೇ ಸರಿ ಮಾಡಿದರು ಎಲ್ಲರೂ ಚಿನ್ನಾಗಿಯೇ ಹೊಂದಿಕೊಂಡರು. ಪ್ರಾರಂಭದಲ್ಲಿ ಕಷ್ಟ ಎನಿಸಿದರೂ ಬಳಿಕ ನಟನೆ ಕಷ್ಟಕರ ಅನಿಸಲಿಲ್ಲ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.

See also  ನ್ಯೂಜಿಲ್ಯಾಂಡ್  ನಲ್ಲಿ  ಅಮ್ಮು, ಜಗದೀಶ್

‘ಹ್ಯಾಪಿ ಜರ್ನಿ’ ನನ್ನ ಮೊದಲ ಕನ್ನಡ ಸಿನಿಮಾವಾದರೂ ಒಳ್ಳೆಯ ಥೀಮ್ ಓರಿಯೆಂಟೆಡ್ ಸಿನಿಮಾವಾಗಿದೆ. ಹೆಚ್ಚು ಮನೋರಂಜನೆಯಿದ್ದು, ಕುತೂಹಲ ಹುಟ್ಟಿಸುತ್ತದೆ. ರಂಗಾಯಣ ಮುಗಿಸಿದ ಬಳಿಕ 2 ವರ್ಷ ತುಂಬಾ ಕಷ್ಟ ಪಟ್ಟಿದ್ದೆ. ಆ ಸಂದರ್ಭದಲ್ಲಿ ಇಷ್ಟು ಒಳ್ಳೆಯ ಸಿನಿಮಾ ಸಿಗುತ್ತದೆ ಅಂದುಕೊಂಡಿರಲಿಲ್ಲ. ತುಂಬಾ ಖುಷಿ ಇದೆ. ನಾನು ಚಿಕ್ಕವನಾಗಿದ್ದಾಗ ತುಂಬಾ ಕಪ್ಪು ಮತ್ತು ತೆಳ್ಳಗಿದ್ದೆ ಹಾಗಾಗಿ ನಟನೆಗೆ ಅವಕಾಶ ಸಿಗುತ್ತದೆ ಅಂದುಕೊಂಡಿರಲಿಲ್ಲ. ನಂಗೆ ಡಾನ್ಸ್ ನಲ್ಲಿ ತುಂಬಾ ಹುಚ್ಚು. ರಾತ್ರಿ 10 ಗಂಟೆಯವರೆಗೂ ಲೆಕ್ಚರರ್ ಮನೆಯಲ್ಲಿದ್ದು, ಡಾನ್ಸ್ ಪ್ರಾಕ್ಟೀಸ್ ಮಾಡ್ತಿದ್ದೆ. ನೃತ್ಯಕ್ಕೋಸ್ಕರ 6 ವರ್ಷಗಳ ಕಾಲ ಶ್ರಮವಹಿಸಿದ್ದೇನೆ. ಇದರಲ್ಲಿ ನನ್ನ ಅಣ್ಣನ ಪಾತ್ರವೂ ಬಹಳಷ್ಟಿದೆ. ಹೀರೋ ಆಗಿ ಎಷ್ಟೇ ಸಿನಿಮಾದಲ್ಲಿ ನಟಿಸಿದರೂ ಜನರ ಮನಸ್ಸಿಗೆ ಮುಟ್ಟುವುದು ತುಂಬಾ ಕಷ್ಟ. ಆ ಪ್ರಯತ್ನದಲ್ಲಿ ನಾನಿದ್ದೇನೆ. ಈ ನಿಟ್ಟಿನಲ್ಲಿ ಮೀಡಿಯಾ ನನಗೆ ತುಂಬಾ ಸಹಾಯ ಮಾಡಿದೆ ಎಂದು ಮನಬಿಚ್ಚಿ ಮಾತನಾಡಿದರು.

ಮನೋಜ್ ನೀವೆಷ್ಟು ಓದಿದ್ದೀರಾ ಎಂದು ಕೇಳಿದರೆ, ನಂಗೆ ಓದೋದಂದ್ರೆ ಅಲರ್ಜಿ. ಓದೋಕೆ ಕೂತ್ರೆ ನಿದ್ದೆ ಮಾಡ್ತಿದ್ದೆ. ಓದೋದು ಬಿಟ್ಟು ಕಬಡ್ಡಿ, ಕ್ರಿಕೆಟ್ ಆಡ್ತಿದ್ದೆ. ಈಗ್ಲೂ ಕ್ರಿಕೆಟ್ ಆಡ್ಲಿಕ್ಕೆ ಛಾನ್ಸ್ ಸಿಕ್ಕಿದ್ರೆ ಹೋಗ್ತೀನಿ ಅಂತಾರೆ. ಮುಂದಿನ ಸಿನಿಮಾದ ಬಗ್ಗೆ ಹಲವಾರು ಕನಸುಗಳಿವೆ ಎನ್ನುತ್ತಾರೆ.

ನಟನೆಯ ಜೊತೆಗೆ ಸಮಾಜ ಸೇವೆಯನ್ನೂ ತೊಡಗಿಸಿಕೊಂಡ ಇವರು ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ಜನರಿಗೂ ನೆರವಾಗುತ್ತಿದ್ದಾರೆ. ಅದಕ್ಕಾಗಿ ಪುತ್ತೂರಿನಲ್ಲಿ ಈಗಾಗಲೇ ವಾಟ್ಸಾಪ್ ಗ್ರೂಪ್ ಮಾಡುವ ಮೂಲಕ ಹಣ ಸಂಗ್ರಹ ಮಾಡಿ ಜನರಿಗೆ ಸಹಾಯ ಮಾಡುತ್ತಿರುವ ಮನೋಜ್ ಉಡುಪಿ ಜಿಲ್ಲೆಯ ಆಲ್ ಓವರ್ ವಿಜಯಬ್ಯಾಂಕ್ ನ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು