News Kannada
Tuesday, December 06 2022

ಮನರಂಜನೆ

ಎಲ್ಲೆಲ್ಲೂ ಸದ್ದು ಮಾಡುತ್ತಿರುವ ‘ಒಂದು ಮೊಟ್ಟೆಯ ಕಥೆ’ ರಾಜ್ ಬಿ. ಶೆಟ್ಟಿ ಮಾತಿಗೆ ಸಿಕ್ಕಾಗ…(ವೀಡಿಯೋ)

Photo Credit :

ಎಲ್ಲೆಲ್ಲೂ ಸದ್ದು ಮಾಡುತ್ತಿರುವ 'ಒಂದು ಮೊಟ್ಟೆಯ ಕಥೆ' ರಾಜ್ ಬಿ. ಶೆಟ್ಟಿ ಮಾತಿಗೆ ಸಿಕ್ಕಾಗ...(ವೀಡಿಯೋ)

“ಒಂದು ಮೊಟ್ಟೆ ಕಥೆ” ಚಿತ್ರದ ನಿರ್ದೇಶಕ ಮತ್ತು ನಟ ರಾಜ್ ಬಿ. ಶೆಟ್ಟಿ ಅವರು ತಮ್ಮ ಮೊದಲ ಚಿತ್ರದಲ್ಲೇ ಸರಳ ಸ್ಕ್ರಿಪ್ಟ್ ಮೂಲಕ ಉತ್ತಮ ಚಿತ್ರ ನೀಡಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದಾರೆ.

ಬಕ್ಕ ತಲೆ, ತೆಳ್ಳಗಿನ, ವ್ಯಕ್ತಿಯೊಬ್ಬ ಸುಂದರ ಯುವತಿಯನ್ನು ವಿವಾಹವಾಗುವ ಆಸೆ ಹೊಂದಿದ್ದು, ವಧು ಅನ್ವೇಷಣೆಯಲ್ಲಿ ತೊಡಗಿರುವುದು ಚಿತ್ರ ಕಥೆಯಾಗಿದ್ದು, ಈ ಕಥೆಯನ್ನು ಅತ್ಯದ್ಭುತವಾಗಿ ತೆರೆಮೇಲೆ ತಂದಿರುವುದರ ಜೊತೆಗೆ, ತನ್ನ ಸರಳತೆ ಮತ್ತು ನೈಜ ನಟನೆಯಿಂದಲೇ ನೋಡುಗನಲ್ಲಿ ವಿಸ್ಮಯವನ್ನು ಮೂಡಿಸಿದ್ದು ಬದುಕಿಗೆ ಹತ್ತಿರವಾಗಿರುವ ಅಂಶಗಳನ್ನು ಚಿತ್ರದಲ್ಲಿ ಅದ್ಭುತವಾಗಿ ತೋರಿಸಿದ್ದಾರೆ.

.

ಈ ಹಿಂದೆ ರೇಡಿಯೋ ಜಾಕಿ ಆಗಿ ಮಂಗಳೂರಿನಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ ಇವರು, ನಂತರ ಜಾಹಿರಾತು ಮಾದ್ಯಮದಲ್ಲೂ ಕಾರ್ಯ ನಿರ್ವಹಿಸಿ, ಮುಂದಕ್ಕೆ ಹಲವು ಕಿರುಚಿತ್ರಗಳನ್ನು ಮಾಡಿದ್ದ ಇವರು ಇದೀಗ “‘ಒಂದು ಮೊಟ್ಟೆಯ ಕಥೆ’ ಎನ್ನುವ ಜೀವನದ ನಿಜವಾದ ಅರ್ಥ ತೋರಿಸುವ ಉತ್ತಮ ಚಿತ್ರವನ್ನು ನೀಡಿದ ಇವರು ಈ ಸಿನೆಮಾ ಮೂಲಕ ತಮ್ಮ ಜೀವನವನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಎನ್ನುವ ರಾಜ್, ತನ್ನ ಬದುಕನ್ನು ಅತಿಯಾಗಿ ಪ್ರೀತಿಸುವ ಇವರು ಬದುಕಿನ ಬಗ್ಗೆ ಬದುಕಿನ ಬಗ್ಗೆ ಇವರ ದೃಷ್ಟಿಕೋನ ವಿಭಿನ್ನ…

ಚಿತ್ರರಂಗ ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್, ಗಣೇಶ್, ರಕ್ಷಿತ್ ಶೆಟ್ಟಿ ಮತ್ತು ರಿಶಭ್ ಶೆಟ್ಟಿ ಸೇರಿದಂತೆ ಹಲವರು ಚಿತ್ರವನ್ನು ನೋಡಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಲೂಸಿಯಾ ಪವನ್ ಕುಮಾರ್ ಮತ್ತು ಸುಹಾನ್ ಪ್ರಸಾದ್ ಚಿತ್ರದ ನಿರ್ಮಾಪಕರಾಗಿದ್ದು, ಶೈಲಶ್ರೀ, ಉಷಾ ಭಂಡಾರಿ, ಶ್ರೇಯ ಅಂಚನ್, ಪ್ರಕಾಶ್ ಸೇರಿದಂತೆ ಎಲ್ಲ ಪಾತ್ರಧಾರಿಗಳು ಉತ್ತಮವಾಗಿ ಅಭಿನಯಿಸಿದ್ದು, ಮುಕುಂದನ್ ಉತ್ತಮ ಸಂಗೀತ ಈ ಚಿತ್ರಕ್ಕೆ ನೀಡಿದ್ದಾರೆ.

ಒಂದು ಮೊಟ್ಟೆಯ ಕತೆ ಭಾರೀ ಸುದ್ದಿಯಲ್ಲಿರುವ ಹಾಗೂ ಯಶಸ್ಸಿನತ್ತ ದಾಪುಗಾಲಿಡುತ್ತಿದ್ದು, ಈ ಸಿನೆಮಾ ನೋಡಲು ಹೋದವರೆಲ್ಲಾ ಥಿಯೇಟರ್‌ನಲ್ಲಿ ಹೊಟ್ಟೆ ಹುಣ್ಣಾಗುವಂತೆ ಬಿದ್ದೂ ಬಿದ್ದೂ ನಗುತ್ತಿರುವುದರ ಜೊತೆಗೆ, ಬದುಕಿನ ಅರ್ಥವನ್ನು ತಿಳಿಯಲು ಈ ಮೊಟ್ಟೆ ಕಥೆ ಸಹಕಾರಿ…

See also  ಚಿತ್ರರಂಗಕ್ಕೆ ಮರಳಿ ಬರುವ ಬಗ್ಗೆ ಬ್ಯೂಟಿ ಕ್ವೀನ್ ರಮ್ಯಾ ಹೇಳಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು