News Kannada
Friday, December 02 2022

ಮನರಂಜನೆ

ಜನರ ಪ್ರೋತ್ಸಾಹಕ್ಕೆ ಋಣಿ: ನಟ ರಿಷಿ

Photo Credit :

ಜನರ ಪ್ರೋತ್ಸಾಹಕ್ಕೆ ಋಣಿ: ನಟ ರಿಷಿ

ಹೊರರಾಷ್ಟ್ರಗಳಾದ ಆಸ್ಟ್ರೇಲಿಯಾ, ದುಬೈ, ಸಿಂಗಪೂರ್ ಸೇರಿದಂತೆ ಇತರೆ ದೇಶಗಳಲ್ಲಿ ಅಲಮೇಲಮ್ಮ ಚಿತ್ರ ತೆರೆಕಂಡಿದ್ದು, ಅಲ್ಲಿನ ಜನ ನಮ್ಮನ್ನು ಪ್ರೋತ್ಸಾಹಿಸಿದ್ದು ಹೆಮ್ಮೆಯ ಸಂಗತಿ ಎಂದು ನಟ ರಿಷಿ ಹೇಳಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಜನ ಚಿತ್ರವನ್ನು ನೋಡುವ ಮೂಲಕ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಹೊಸಬರೇ ಸೇರಿ ನಟಿಸಿದ ಆಲಮೇಲಮ್ಮ ಇದೀಗ 25 ದಿನಗಳನ್ನು ಪೂರೈಸುತ್ತಿದ್ದು, ಈ ಯಶಸ್ಸು ಜನರಿಗೆ ಸಲ್ಲಬೇಕು. ಚಿತ್ರದ ಯಶಸ್ಸು ಕನ್ನಡಚಿತ್ರರಂಗಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ. ಬಹುತೇಕ ಹೊಸಬರೆ ಕಲಾವಿದರಾಗಿರುವ ಈ ಚಿತ್ರವು ಯಶಸ್ವಿಯಾಗಿದ್ದು, ಇತರೆ ಭಾಷೆಗಳಿಗೂ ರಿಮೇಕ್ ಆಗಲಿದೆ.

ಮೂಲ ನಾನೊಬ್ಬ ನಾಟಕ ಕಲಾವಿದ ನಂತರ ಅನುರೂಪ ಧಾರವಾಹಿಯಲ್ಲಿ ನಟಿಸಿದೆ. ನಂತರ ಚಿತ್ರರಂಗದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಹಾಸ್ಯ ಮತ್ತು ಪತ್ತೆದಾರಿ ಕಥೆಯುಳ್ಳ ಚಿತ್ರದಲ್ಲಿ ನಾನು ಒಬ್ಬ ಅಮಾಯಕ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದ ನಂತರ ಕವಲು ದಾರಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಇದೆಲ್ಲವೂ ಜನರೇ ಕೊಟ್ಟ ಕೊಡುಗೆ ಎಂದಿದ್ದಾರೆ.

ಆಲಮೇಲಮ್ಮ ಚಿತ್ರವು 8 ಕೇಂದ್ರಗಳಲ್ಲಿ ಬಿಡುಗಡೆಯಾಗಿತ್ತು. ಕಡಿಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೂ ಒಳ್ಳೆಯ ಆದಾಯ ತಂದುಕೊಟ್ಟಿದೆ ಎಂದರು.

See also  ಏನ್ ಗುರೂ! “ಹುಲಿರಾಯ” ಬೇಜಾನ್ ಸೌಂಡ್ ಮಾಡ್ತವ್ನೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು