News Kannada
Thursday, December 08 2022

ಮನರಂಜನೆ

ಗಾಯಕಿಯಾದ ನಟಿ ಹೇಮಮಾಲಿನಿ

Photo Credit :

ಗಾಯಕಿಯಾದ ನಟಿ ಹೇಮಮಾಲಿನಿ

ಬಾಲಿವುಡ್‌ ನಟಿ ಹೇಮಮಾಲಿನಿ ತಮ್ಮ ಮೊದಲ ಮ್ಯೂಸಿಕ್ ಆಲ್ಬಮ್‌ನ್ನು ಬಿಡುಗಡೆ ಮಾಡಿದ್ದಾರೆ. 68 ವರ್ಷದ ಹೇಮಮಾಲಿನಿ ಅವರು ‘ಗೋಪಾಲ ಕೋ ಸಮರ್ಪಣ್’ ಎನ್ನುವ ಆಲ್ಬಮ್‌ನ್ನು ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ನಂತರ ಮಾತನಾಡಿದ ಅವರು ನಾನು ಇಂತಹ ಒಂದು ಆಲ್ಬಮ್‌ನ್ನು ರಚಿಸುತ್ತೇನೆ ಎಂದು ತಿಳಿದಿರಲಿಲ್ಲ. ಹಲವು ವರ್ಷಗಳಿಂದ  ಸಂಗೀತದತ್ತ ಒಲವಿದ್ದರೂ ಗಾಯಕಿಯಾಗಳು ಇಷ್ಟೋಂದು ಸಮಯ ತೆಗೆದುಕೊಂಡಿತು. ಈ ಆಲ್ಬಂ ಭಜನೆ ಹಾಡುಗಳಿಂದ ಕೂಡಿದೆ. ಹಾಗಾಗಿ ಇದನ್ನು ಬಿಡುಗಡೆ ಮಾಡಲು ಕಷ್ಣ ಜನ್ಮಾಷ್ಠಮಿ ಸರಿಯಾದ ಸಮಯ.

ಈ ಹಾಡುಗಳನ್ನು ಹಾಡಲು ನನಗೆ ಒಂದು ವರ್ಷಗಳೇ ಬೇಕಾಯಿತು. ನಾನು ವೃತ್ತಿಪರ ಗಾಯಕಿಯಲ್ಲ. ನನಗೆ ಡ್ಯಾನ್ಸ್‌ ಶೋ ಕೂಡಾ ಇದೆ. ಪಾರ್ಲಿಮೆಂಟ್‌ನ ಸೆಶನ್‌ನಲ್ಲೂ ಭಾಗವಹಿಸಬೇಕು ಹಾಗೂ ನನ್ನ ಮಗಳು ಈಶಾ ಕೂಡಾ ಗರ್ಭೀಣಿ. ಹಾಗಾಗಿ ನನಗೆ ಸಮಯವೇ ದೊರೆಯುವುದಿಲ್ಲ ಎಂದು ಹೇಳಿದ್ದಾರೆ. ನನ್ನ ಹಾಡು ಹಾಗೂ ವಿಡಿಯೋವನ್ನು ಧರ್ಮೆಂದ್ರಗೆ ತೋರಿಸಿದ್ದೇನೆ. ಅವರು ಇದನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ನನ್ನ ಸ್ಫೂರ್ತಿಗಾರರಾದ ಲತಾ ಮಂಗೇಶ್ಕರ್‌ರಿಗೂ ಕಳಿಸಿ ಅವರಿಂದ ಆಶೀರ್ವಾದ ಪಡೆದುಕೊಳ್ಳುವುದಾಗಿ ತಿಳಿಸಿದರು. 

 

See also  ನಟಿ ರೇಖಾಗೆ ಕೊರೋನಾ ಪರೀಕ್ಷೆಗೆ ಸಲಹೆ ನೀಡಿದ ಬಿಎಂಸಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು