News Kannada
Monday, December 05 2022

ಮನರಂಜನೆ

ಸದಾಶಿವ ಬ್ರಹ್ಮಾವರ ಕುರಿತು ಸುಳ್ಳು ವಂದತಿ- ಮಗ, ಅಳಿಯ ಸ್ಪಷ್ಟನೆ

Photo Credit :

ಸದಾಶಿವ ಬ್ರಹ್ಮಾವರ ಕುರಿತು ಸುಳ್ಳು ವಂದತಿ- ಮಗ, ಅಳಿಯ ಸ್ಪಷ್ಟನೆ

ನಮ್ಮ ಮಾವ ನಟ ಸದಾಶಿವ ಬ್ರಹ್ಮಾವರ ಕುರಿತು ಅನವಶ್ಯಕವಾಗಿ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿಗಳನ್ನು ಹರಿದಾಡಿಸುತ್ತಿವೆ ಎಂದು ಹುಬ್ಬಳ್ಳಿಯಲ್ಲಿ ಸದಾಶಿವ ಬ್ರಹ್ಮವರ್ ಅಳಿಯ ಸುರೇಶ್ ಉಪ್ಪಿನ್ ಸ್ಪಷ್ಟನೆ ಹೇಳಿದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನೇ ಇಂದು ಬೆಳಿಗ್ಗೆ ಬೈಲಹೊಂಗಲದ ಅವರ ಮಗನ ಮನೆಗೆ ಬಿಟ್ಟು ಬಂದಿದ್ದೇನೆ. ಅವರಿಗೆ ಯಾವುದೇ ತೊಂದರೆಗಳಾಗಲೀ, ಕಿರುಕುಳ ನೀಡಿಲ್ಲ. ವಿನಾ ಕಾರಣ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ತಿಂಗಳಿಗೆ ಎರಡು ಮೂರು ಭಾರಿ ಮನೆಗೆ ಬಂದು ಹೋಗುತ್ತಾರೆ. ನಮ್ಮ ಜೊತೆ ಚೆನ್ನಾಗಿಯೇ ಇದ್ದಾರೆ ಎಂದು ಸ್ಪಷ್ಟಪಡಿಸಿದರು.

ನಿನ್ನೆ ಅವರು ಕುಮುಟಾದಲ್ಲಿ ಪರ್ಸ್ ಕಳೆದುಕೊಂಡಿದ್ದರಿಂದ ಅಲ್ಲಿದ್ದವರ ಬಳಿ ಹಣ ಕೇಳಿದ್ದಾರೆ. ಇಂದು ಬೆಳಿಗ್ಗೆ ನಾನು ಅವರನ್ನು ಬೈಲಹೊಂಗಲಕ್ಕೆ ಬಿಟ್ಟು ಬಂದಿದ್ದೇನೆ ಎಂದರು. ಮತ್ತೊಂದಡೆ ಬೈಲಹೊಂಗಲದಲ್ಲಿ ಮಾತನಾಡಿರುವ ಅವರ ಮಗ ರವಿಂದ್ರ ಬ್ರಹ್ಮಾವರ , ನಮ್ಮ ತಂದೆ ವಯೋ ಸಹಜವಾಗಿ ಆ ರೀತಿ ಮಾತನಾಡುತ್ತಿದ್ದಾರೆ. ಅವರು ನಮ್ಮ ಜತೆಯೇ ಇದ್ದು, ಚೆನ್ನಾಗಿ ನೋಡಿಕೊಂಡಿದ್ದೇವೆ. ನಮ್ಮ ಮನೆಯಲ್ಲಿ ಒಂದಿಷ್ಟು ದಿನ ನಮ್ಮ ಅಕ್ಕನ ಮನೆಯಲ್ಲಿ ಒಂದಿಷ್ಟು ದಿನ ಇರ್ತಾರೆ ಎಂದು ರವಿಂದ್ರ ಸ್ಪಷ್ಟಪಡಿಸಿದ್ದಾರೆ.

 

See also  ಪ್ರಕಾಶ್ ರಾಜ್ ಗೆ ಶುಭ ಕೋರಿದ ಚಿರಂಜೀವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು