News Kannada
Wednesday, November 30 2022

ಮನರಂಜನೆ

ಕಾಫಿ ತೋಟ ಚಿತ್ರ ಯಶಸ್ವಿ ಪ್ರದರ್ಶನ, ನಿರ್ದೇಶಕ ಟಿ.ಎಸ್ ಸೀತಾರಾಮ್ ಸಂತಸ - 1 min read

Photo Credit :

ಕಾಫಿ ತೋಟ ಚಿತ್ರ ಯಶಸ್ವಿ ಪ್ರದರ್ಶನ, ನಿರ್ದೇಶಕ ಟಿ.ಎಸ್ ಸೀತಾರಾಮ್ ಸಂತಸ

ಮೈಸೂರು- ಕಾಫಿ ತೋಟ ಚಿತ್ರ ಟೀಸರ್ ಅಂತರ್ಜಾಲದಲ್ಲಿ 1.8 ಮಿಲಿಯನ್ ಜನ ನೋಡಿದ್ದು ಚಿತ್ರ ಸಹ ರಾಜ್ಯಾಧ್ಯಾಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ಎಂದು ಚಿತ್ರದ ನಿರ್ದೇಶಕ ಟಿ.ಎನ್.ಸೀತಾರಾಮ್ ಸಂತೋಷ ವ್ಯಕ್ತ ಪಡಿಸಿದ್ದಾರೆ. 

ಇಂದು ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಖ್ಯಾತ ನಿರ್ಧೇಶಕ ಟಿ.ಎನ್.ಸೀತಾರಾಮ್ ಹಾಗೂ ನಟ, ನಟಿಯರು ಕ್ರೈಂ, ಥ್ರಿಲರ್ ಕಥಾ ಹಂದರವಿರುವ, ಮನ್ವಂತರ ಚಿತ್ರ ತಂಡದ ‘ಕಾಫಿ ತೋಟ’ ಕಳೆದ ಆ.18 ರಿಂದ  ರಾಜ್ಯಾದ್ಯಂತ ಅತ್ಯಂತ ಯಶಸ್ವಿ ಪ್ರದರ್ಶನ ಕಂಡು ಅಪಾರ ಜನ ಮನ್ನಣೆಗಳಿಸಿದೆ ಎಂದು ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ್ ಹರ್ಷ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಒಟ್ಟು 85 ಕೇಂದ್ರಗಳಲ್ಲಿ ಬಿಡುಗಡೆಯಾಗಿರುವ ಕಾಫಿತೋಟವು ಬೆಂಗಳೂರಿನಲ್ಲಿ ಮಳೆಯ ನಡುವೆಯೂ  ಅತ್ಯಂತ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ, ಅಂತರ್ಜಾಲದಲ್ಲಿ ಬಿಡುಗಡೆಯಾದ ಟೀಸರ್ ಅನ್ನು 1.8 ಮಿಲಿಯನ್ ವೀಕ್ಷಕರು ವೀಕ್ಷಿಸುವ ಮೂಲಕ ಅಪಾರ ಜನ ಬೆಂಬಲವ್ಯಕ್ತವಾಗಿದೆ. ಅಲ್ಲದೇ  ಕನ್ನಡ ಚಿತ್ರಗಳಿಗೆ ಇನ್ನೂ ಹೆಚ್ಚಿನ ಬೆಂಬಲ, ಪ್ರೋತ್ಸಾಹವನ್ನು ಪ್ರೇಕ್ಷಕರಿಂದ ನಿರೀಕ್ಷಿಸಲಾಗಿದೆ ಎಂದರು.

ರಾಜಕೀಯ ತಂತ್ರ-ಪ್ರತಿತಂತ್ರವಿರುವ ಮತದಾನ ಸಿನಿಮಾ, ಸಂಬಂಧಗಳನ್ನು ಬೆಸೆಯುವ ಮೀರ ಮಾಧವ, ಕ್ರೈಮ್ ಪತ್ತೇದಾರಿ ಕಥೆಯಾಧಾರಿತ ಕಾಫಿತೋಟ ಸೇರಿದಂತೆ ವಿಭಿನ್ನ ಸಿನಿಮಾಗಳನ್ನೇ ಕನ್ನಡ ಪ್ರೇಕ್ಷಕರಿಗೆ ನೀಡಿರುವೆ, ಸಮಯದ ಪರಿಮಿತಿಯಲ್ಲಿ ಕಥೆಯನ್ನು ಹೇಳುವ ಅನಿವಾರ್ಯತೆ ಸಿನಿಮಾಗಿದೆ. ಧಾರವಾಹಿ ಇದಕ್ಕೆ ವಿಭಿನ್ನವಾಗಿರುವುದು ಎಂದು ಸೀತಾರಾಮ್ ಸ್ಪಷ್ಟಪಡಿಸಿದರು.

ಕಾಫಿತೋಟ ಚಿತ್ರದ ಛಾಯಾಗ್ರಾಹಕ ಆಶೋಕ ಕಶ್ಯಪ್ ಮಾತನಾಡಿ ಕಳೆದ 35 ವರ್ಷಗಳಲ್ಲಿಯೇ ಕಾಫಿತೋಟ ಸಂತೃಪ್ತಿಯನ್ನು ನೀಡಿದ ಸಿನಿಮಾವಾಗಿದೆ, ಚಿತ್ರವನ್ನು ಚಿಕ್ಕಮಗಳೂರು, ಉಡುಪಿ, ಕಾಪು ಪ್ರದೇಶಗಳ ಸುಂದರ ಪ್ರಕೃತಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಲ್ಲದೇ ಕಥೆಗೆ ಪೂರಕವಾಗಿ ಉತ್ತರ ಪ್ರದೇಶದ ವಾರಣಾಸಿ ಮತ್ತು ಮನಾಲಿಯಲ್ಲಿಯೂ ಚಿತ್ರ ಚಿತ್ರೀಕರಣ ನಡೆಸಲಾಗಿದೆ.  ಕಾಫಿತೋಟ ಚಿತ್ರದಲ್ಲಿ ಅಶ್ಲೀಲ ಪದಬಳಕೆಯಾಗಲಿ, ಮುಜುಗರದ ದೃಶ್ಯಗಳಿಗೆ ಎಡೆಯಿಲ್ಲ, ನೈಜತೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಕಾಫಿತೋಟದ ಸಿನಿಮಾ ನಾಯಕ ರಘು ಮುಖರ್ಜಿ, ನಾಯಕಿ ರಾಧಿಕಾ ಚೇತನ  ಮಾತನಾಡಿ ಸಿನಿಮಾದಲ್ಲಿ ವಿಭಿನ್ನ ಪಾತ್ರಗಳಿಗೆ ನ್ಯಾಯ ಒದಗಿಸಿದ್ದೇವೆ, ಕಥೆಯು ಮೊದಲರ್ಧ ಮತ್ತು ಕೊನೆಯರ್ಧ ಭಾಗದಲ್ಲಿ ಬೇರೆ ಬೇರೆ ಆಯಾಮಗಳಿಂದ ಕೂಡಿದೆ. ಭಾಷಾ ಪ್ರಬುದ್ಧತೆ, ಭಾವನೆಗಳ ಏರಿಳಿತ, ಪಾತ್ರನಿರ್ವಹಣೆಯು ನಿರ್ದೇಶಕರಿಂದ ಕಲಿತಿದ್ದು ಇದೊಂದು ವಿನೂತನ ಅನುಭವವೆಂದು ತಿಳಿಸಿದರು.

 

See also  ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು