News Kannada
Friday, December 09 2022

ಮನರಂಜನೆ

ಪ್ರಧಾನಿ ಮೋದಿ ನಿಜಕ್ಕೂ ಅದ್ಭುತ. ಅವರ ಕೈಯಲ್ಲಿ ಏನು ಆಗುತ್ತದೆಯೋ ಅದನ್ನು ಅವರು ಮಾಡಿ ತೋರಿಸುತ್ತಾರೆ: ಉಪೇಂದ್ರ

Photo Credit :

ಪ್ರಧಾನಿ ಮೋದಿ ನಿಜಕ್ಕೂ ಅದ್ಭುತ. ಅವರ ಕೈಯಲ್ಲಿ ಏನು ಆಗುತ್ತದೆಯೋ ಅದನ್ನು ಅವರು ಮಾಡಿ ತೋರಿಸುತ್ತಾರೆ: ಉಪೇಂದ್ರ

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರು ಇತ್ತೀಚೆಗಷ್ಟೇ ಉತ್ತಮ ಪ್ರಜಾ ಪಾರ್ಟಿಯನ್ನು ಘೋಷಿಸುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ.

ಉಪೇಂದ್ರ ಅವರು ಈ ಕುರಿತಂತೆ ಮಾತನಾಡಿದ್ದು, ಪಾರ್ಟಿ ತೆಗೆಯುವುದು ಯೋಜಿತವಾಗಿರಲಿಲ್ಲ. ಒಂದು ಚಿತ್ರದ ಬಳಿಕ ಆ ಬಗ್ಗೆ ಯೋಜಿಸುತ್ತಿದ್ದೆ ಅಷ್ಟರಲ್ಲೇ ನಾನು ಬಿಜೆಪಿ ಸೇರುತ್ತಿದ್ದೇನೆ ಎಂಬ ವದಂತಿಗಳು ಹರಿದಾಡಲಾರಂಭಿಸಿದ್ದು, ನಾನು ಬಿಜೆಪಿ ಸೇರುತ್ತಿದ್ದೇನೆ ಎಂಬ ವದಂತಿಗಳು ಹರಿದಾಡುತ್ತಿದ್ದಂತೆ ಬೆಕ್ಕಿಗೆ ಗಂಟೆ ಕಟ್ಟಿರುವುದನ್ನು ಮನಗಂಡ ಮಾನ ಕೂಡಲೇ ಎಚ್ಚರಿಕೆಯಿಂದ ಯೋಜನೆಯನ್ನು ರೂಪಿಸಿದೆ ಎಂದು ಹೇಳಿದ್ದಾರೆ.

ಇನ್ನು ಯಾವುದಾದರೂ ಪಕ್ಷವನ್ನು ಬೆಂಬಲಿಸುತ್ತೀರಾ? ಎಂದು ಕೇಳಿದಕ್ಕೆ ಉಪೇಂದ್ರ ಅವರು, ನಾನು ಅಂದುಕೊಂಡಂತೆ ಅಭ್ಯರ್ಥಿಗಳು ಕಣದಲ್ಲಿದ್ದರೇ ಅಂತಹವರನ್ನು ನಾನು ಬೆಂಬಲಿಸುತ್ತೇನೆ. ನನಗೆ ಜಾತಿ, ಹಣ ಬೆಂಬಲ ಹೊಂದಿರುವವರು ಬೇಡ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿದ ಉಪೇಂದ್ರ ಪ್ರಧಾನಿ ಮೋದಿ ಅವರನ್ನು ನೋಡಿದಾಗ, ಆ ಮನುಷ್ಯ ನಿಜಕ್ಕೂ ಅದ್ಭುತ. ಅವರ ಕೈಯಲ್ಲಿ ಏನು ಆಗುತ್ತದೆಯೋ ಅದನ್ನು ಅವರು ಮಾಡಿ ತೋರಿಸುತ್ತಾರೆ ಎಂದು ನಾನು ನಂಬುತ್ತೇನೆ. ಇನ್ನು ಅವರ ಪಕ್ಷ ಸೇರುವ ಕುರಿತಂತೆ ಏನು ನಿರ್ಧಾರ ಮಾಡಿಲ್ಲ. ಇಂದು ರಾಜಕೀಯ ವ್ಯವಹಾರವಾಗಿ ಬದಲಾಗಿದ್ದು ಇದನ್ನು ಬಿಟ್ಟು ನನಗೆ ಗೊತ್ತಿಲ್ಲ. ಬಹುಶಃ ಮೊದಲು ಜನರನ್ನು ತಲುಪಲು ನಿಮಗೆ ಹಣ ಬೇಕಾಗಿತ್ತು. ಆದರೆ ಇದೀಗ ತಂತ್ರಜ್ಞಾನದಿಂದ ಸುಲಭವಾಗಿ ಜನರನ್ನು ತಲುಪಬಹುದಾಗಿದೆ ಎಂದರು.

See also  ಶೀಘ್ರವೇ ಕಿಲಾಡಿ ಚಿತ್ರ ತೆರೆಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು