News Kannada
Wednesday, September 28 2022

ಮನರಂಜನೆ

ಮೈಸೂರು ಚಲನ ಚಿತ್ರೋತ್ಸವದಲ್ಲಿ ಮೆರುಗು ನೀಡಿದ ತಾರೆಯರು - 1 min read

Photo Credit :

ಮೈಸೂರು ಚಲನ ಚಿತ್ರೋತ್ಸವದಲ್ಲಿ ಮೆರುಗು ನೀಡಿದ ತಾರೆಯರು

ಮೈಸೂರು: ದಸರಾ‌ ಮಹೋತ್ಸವದ‌‌ ಅಂಗವಾಗಿ ನಡೆಯುವ ಮೈಸೂರು ದಸರಾ ಚಲನ ಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ಲೋಕೋಪಯೋಗಿ‌ ಸಚಿವರಾದ ಹೆಚ್, ಸಿ. ಮಹದೇವಪ್ಪ, ಕನ್ನಡ ಮತ್ತು ಸಂಸ್ಕ್ರತಿ ಸಚಿವೆ ಉಮಾಶ್ರೀ,  ಸಂಸದ ದ್ರುವನಾರಾಯಣ, ಶಾಸಕ ಎಂಕೆ. ಸೋಮಶೇಖರ್, ಶಾಸಕ ಕಳಲೆ ಎನ್. ಕೇಶವಮೂರ್ತಿ, ದಸರಾ ವಿಶೇಷಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಿ. ರಂದೀಪ್‌,  ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಎಸ.ವಿ. ರಾಜೇಂದ್ರಸಿಂಗ್ ಬಾಬು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಸಾರಾ ಗೋವಿಂದು, ನಟ ಆಧಿತ್ಯ ಹಾಗೂ ನಟಿ ರಚಿತ ರಾಮ್ ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಿದರು. ನಿರ್ದೆಶಕ ಪಿ.ಶೇಷಾದ್ರಿ, ಚಿತ್ರ ನಿರ್ದೆಶಕ ನಂದಕಿಶೋರ್ ಉಪಸ್ಥಿತರಿದ್ದರು.

ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಆರ್ .ಎನ್. ಸುದರ್ಶನ್, ಬಿ.ವಿ.ರಾಧ ಹಾಗೂ ಲಂಬೂ ನಾಗೇಶ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.ಮೂರು ನಿಮಿಷಗಳ  ಕನ್ನಡ ಚಿತ್ರರಂಗದ ದ್ರಶ್ಯ ಅವತರಣಿಕೆ‌ ಪ್ರದರ್ಶಿಸಲಾಯಿತು. ಇದೇ ಸಂದರ್ಭದಲ್ಲಿ  ಮೈಸೂರು ದಸರಾ ಚಲನಚಿತ್ರೋತ್ಸವದ ಕಿರು ಕೈಪಿಡಿಯನ್ನು ‌ಬಿಡುಗಡೆಗೊಳಿಸಲಾಯಿತು.

ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಿತ್ರ ನಿರ್ದೆಶಕ‌ ಪಿ. ಶೇಷಾದ್ರಿ ಅವರು ಮಾತನಾಡಿ ಭಾರತ ಚಿತ್ರರಂಗ ಜಗತ್ತಿನಲ್ಲೆ ಚಿತ್ರನಿರ್ಮಾಣ ದಲ್ಲಿ‌ಮೊದಲ ಸ್ಥಾನದಲ್ಲಿದೆ, ಇದು ಹೆಮ್ಮೆಯ ವಿಚಾರ ಹಾಗೂ ಕನ್ನಡ ಚಿತ್ರರಂಗ ಮುಂಚೂಣಿಯಲ್ಲಿದೆ.ಮೈಸೂರು ದಸರಾ ಚಲನಚಿತ್ರೋತ್ಸವ ನಡೆಸುತ್ತಿರವುದು ಹಾಗೂ ಪನೋರಮ ಚಿತ್ರ ಪ್ರದರ್ಶನವಾಗುತ್ತಿರುವುದು ಬಹುಮುಖ್ಯ ಮೈಲಿಗಲ್ಲು ಎಂದು‌ ತಿಳಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ‌‌ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರುಗಳನ್ನು ಸಚಿವರಾದ ಶ್ರಿಮತಿ ಉಮಾಶ್ರೀ ಅವರು ಸನ್ಮಾನಿಸಿದರು. 

ಸಚಿವರು ಮಾತನಾಡಿ ಕನ್ನಡ ನಾಡಿನ ಚಾರಿತ್ರಿಕ ಸ್ಥಳ ಮೈಸೂರು, ಸಮಸ್ತ ಜನತೆಗೆ ದಸರೆಯ  ಶುಭಾಶಯಗಳನ್ನು ತಿಳಿಸಿದರು. ಮೈಸೂರು ನಾಡಿಗೆ ಕಲೆ, ಕಲಾವಿದರನ್ನು ಕೊಡುಗೆಯಾಗಿ ಕೊಟ್ಟಿದೆ. ರಾಜ್ಯ ಸರ್ಕಾರ ಚಿತ್ರರಂಗಕ್ಕೆ ಉತ್ತೇಜನ ನೀಡಿರುತ್ತಾರೆ. ಕಲಾವಿದರು ಹಾಗೂ‌ ತಂತ್ರಜ್ಞರಿಗೆ ಮೀಸಲಿಟ್ಟಿದೆ, ರಾಜ್ ಕುಮಾರ್ ಸ್ಮರಣೆಗಾಗಿ‌, ಸ್ಮರಕಕ್ಕಾಗಿ ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರದಿಂದ ಜನತಾ ಚಿತ್ರಮಂದಿರ ನಿರ್ಮಿಸಲು‌, ಮುಖ್ಯವಾಗಿ  ಇದು ಕನ್ನಡ ಚಿತ್ರ ಪ್ರದರ್ಶನಕ್ಕೆ  ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಎಸ್.ವಿ.ರಾಜೇಂದ್ರಸಿಂಗ್ ‌ಬಾಬು ಅವರು ಮಾತನಾಡಿ ಅತೀ ಶೀಘ್ರದಲ್ಲಿ ಮೈಸೂರಿನಲ್ಲಿ ಚಿತ್ರನಗರಿಗೆ‌ ಶಂಕುಸ್ಥಾಪನೆ ನೆರವೇರಿಸಲಾಗುವು ಎಂದು‌ ತಿಳಿಸಿದರು. 

 

See also  ರಮ್ಯಾ ಹುಟ್ಟುಹಬ್ಬಕ್ಕೆ ಮಂಡ್ಯಕ್ಕೆ ಬರುತ್ತಾರೆ ಎಂದು ಕಾಯ್ದಿದ್ದ ಜನತೆಗೆ ನಿರಾಶೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು