News Kannada
Saturday, October 01 2022

ಮನರಂಜನೆ

ಸೆ.29ಕ್ಕೆ ಸೂರಜ್ ಶೆಟ್ಟಿ ನಿರ್ದೇಶನದ ‘ಅಮ್ಮೆರ್ ಪೊಲೀಸಾ’ ಚಿತ್ರಕ್ಕೆ ಮುಹೂರ್ತ - 1 min read

Photo Credit :

ಸೆ.29ಕ್ಕೆ ಸೂರಜ್ ಶೆಟ್ಟಿ ನಿರ್ದೇಶನದ ‘ಅಮ್ಮೆರ್ ಪೊಲೀಸಾ’ ಚಿತ್ರಕ್ಕೆ ಮುಹೂರ್ತ

ಮಂಗಳೂರು: ಎಕ್ಕಸಕ, ಪಿಲಿಬೈಲ್ ಯಮುನಕ್ಕ ಯಶಸ್ವಿ ಚಿತ್ರಗಳನ್ನು ಕೋಸ್ಟಲ್ ವುಡ್ ಗೆ ನೀಡಿದ ಯಶಸ್ವಿ ನಿರ್ದೇಶಕ ಕೆ.ಸೂರಜ್ ಶೆಟ್ಟಿ ನಿರ್ದೇಶನದಲ್ಲಿ “ಅಮ್ಮೆರ್ ಪೊಲೀಸಾ’ ಚಿತ್ರಕ್ಕೆ ಸೆ. 29ರಂದು 9ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯಲಿದೆ.

ಕಿಶೋರ್ ಡಿ.ಶೆಟ್ಟಿ ಅವರ ಲಕುಮಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಮೂರನೇ ಸಿನಿಮಾ. ರಾಜೇಶ್ ಬಿ.ಶೆಟ್ಟಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಿಶೋರ್ ಡಿ.ಶೆಟ್ಟಿ ಮಾತನಾಡಿ, ಈ ಚಿತ್ರವನ್ನು ಸಾಧಾರಣ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ ತಾಂತ್ರಿಕತೆಯಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳದೆ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಹಿಂದಿನ ಚಿತ್ರಗಳಂತೆ ಅಮ್ಮೆರ್ ಪೊಲೀಸಾ ಸಿನಿಮಾ ಹಾಸ್ಯ ಮನರಂಜನೆಯನ್ನು ಒಳಗೊಂಡಿದೆ ಎಂದರು.

ಚಿತ್ರಕ್ಕೆ ಸಚಿನ್ ಎಸ್.ಶೆಟ್ಟಿ ಅವರ ಛಾಯಾಗ್ರಾಹಕರಾಗಿದ್ದಾರೆ. ಸಂದೀಪ್ ಆರ್ ಬಳ್ಳಾಲ್ ಸಂಗೀತ ನಿರ್ದೇಶಕರಾಗಿ , ಮಹೇಶ್ ಎಣ್ಮೂರು ಕಲಾ ನಿರ್ದೇಶನಕರಾಗಿದ್ದಾರೆ. ಮುಖ್ಯ ಪಾತ್ರದಲ್ಲಿ ರೂಪೇಶ್ ಶೆಟ್ಟಿ, ಪೂಜಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಹಾಸ್ಯ ಪಾತ್ರದಲ್ಲಿ ಅರವಿಂದ್ ಬೋಳಾರ್, ಸತೀಶ ಬಂದಲೆ, ಪ್ರಸನ್ನ ಶೆಟ್ಟಿ ಮೈಲೂರು, ವಿಸ್ಮಯ ವಿನಾಯಕ, ಮೈಮ್ ರಾಮ್ ದಾಸ್, ದೀಪಕ್ ರೈ ಪಾಣಾಜೆ, ಶಶಿ ಬೆಳ್ಳಾಯರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.  ಅಕ್ಟೋಬರ್ 25ರ ವರೆಗೆ ಮುಡಿಪು ಸಮೀಪದ ಇರಾದಲ್ಲಿ ಚಿತ್ರೀಕರಣ ಸಾಗಲಿದೆ ಎಂದರು.

See also  'ನೀರ್‌ದೋಸೆ' ಚಿತ್ರದ ಟ್ರೇಲರ್ ರಿಲೀಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು