ಪಾಣಿಪತ್(ಹರಿಯಾಣ): 22ವರ್ಷದ ಗಾಯಕಿ ಹರ್ಷಿತಾ ದಾಹಿಯಾ ಅವರ ಮೇಲೆ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಗಾಯಕಿ ಹರ್ಷಿತಾ ಪಾಣಿಪತ್ ನಲ್ಲಿ ನಿನ್ನೆ ಸಂಜೆ 4 ಗಂಟೆಗೆ ಕಾರ್ಯಕ್ರಮವೊಂದನ್ನು ಮುಗಿಸಿ ದೆಹಲಿಗೆ ಹಿಂತಿರುಗುತ್ತಿದ್ದ ವೇಳೆ ಕಪ್ಪು ಕಾರಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಹರ್ಷಿತಾ ಕಾರನ್ನು ನಿಲ್ಲಿಸಿ ಕತ್ತು ಹಾಗೂ ತಲೆಯ ಭಾಗಕ್ಕೆ ಆರು ಭಾರಿ ಗುಂಡಿಕ್ಕಿ ಹತ್ಯೆಯನ್ನು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಕೆ ಹರಿಯಾಣ ಜಾನಪದ ಗಾಯಕಿಯಾಗಿ ಪ್ರಸಿದ್ಧಿಯಾಗಿದ್ದರು. ಕಾರಿನಲ್ಲಿ ಹರ್ಷಿತಾ ಚಾಲಕ ಹಾಗೂ ಇನ್ನಿಬ್ಬರು ಸಹಪಾಠಿಗಳು ಕಾರಿನಲ್ಲಿದ್ದು ಅವರನ್ನು ದುಷ್ಕರ್ಮಿಗಳು ಹೊರಬರುವಂತೆ ಹೇಳಿ ನಂತರ ಆಕೆ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ತಿಳಿಸಿದ್ದಾರೆ.
ಹರ್ಷಿತಾ ಈಚೆಗೆ ತನಗೆ ಜೀವಬೆದರಿಕೆಗಳು ಇವೆ. ಆದರೆ ಇದು ಯಾವುದಕ್ಕೂ ಹೆದರುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಬಿಟ್ಟಿದ್ದರು. ಈ ಕುರಿತು ಪ್ರಕರಣ ದಾಖಲಾಗಿದೆ.